ನವದೆಹಲಿ: ಈ ಲೋಕಸಭೆ ಚುನಾವಣೆಯಲ್ಲಿ ಶತಾಯ ಗತಾಯ ಗೆದ್ದು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಸೆಲೆಬ್ರಿಟಿಗಳಿಗೂ ಗಾಳ ಹಾಕುತ್ತಿದೆ.ಇದೀಗ ಕಾಂಗ್ರೆಸ್ ಇಂಧೋರ್ ಕ್ಷೇತ್ರದಿಂದ ಕಣಕ್ಕಿಳಿಸಲು ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ಗೇ ಆಫರ್ ನೀಡಿದೆ ಎಂಬ ಸುದ್ದಿ ಕೇಳಿಬಂದಿದೆ. ಇಂಧೋರ್ ನಲ್ಲಿ ರಾಹುಲ್ ದ್ರಾವಿಡ್ ರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಟಿಕೆಟ್ ಆಫರ್ ನೀಡಿದೆ ಎನ್ನಲಾಗಿದೆ.ಆದರೆ ದ್ರಾವಿಡ್ ಚುನಾವಣೆಯ ರಾಯಭಾರಿ. ಆದರೆ ರಾಜಕೀಯದ ಜಂಜಾಟದಲ್ಲಿ ಬೀಳುವ ವ್ಯಕ್ತಿತ್ವದವರು ಅಲ್ಲ.