[$--lok#2019#state#karnataka--$] ರಾಜಧಾನಿಯ ಕೇಂದ್ರ ಲೋಕಸಭೆ ಕ್ಷೇತ್ರ 2019ರ ರಣಕಣ ಕುತೂಹಲ ಮೂಡಿಸಿದೆ. ಬಿಜೆಪಿ – ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇಲ್ಲಿದೆ. ಆದರೂ ಜಸ್ಟ್ ಆಸ್ಕಿಂಗ್ ಮೂಲಕ ಪಕ್ಷೇತರ ಅಭ್ಯರ್ಥಿ, ನಟ ಪ್ರಕಾಶ ರಾಜ್ ಸದ್ದು ಮಾಡಿದ್ದಾರೆ. ಬಿಜೆಪಿಯಿಂದ ಎರಡು ಬಾರಿ ಸಂಸದರಾಗಿರುವ ಪಿ.ಸಿ.ಮೋಹನ್ ಈ ಬಾರಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ರಿಜ್ವಾನ್ ಅರ್ಷದ್ ಹಾಗೂ ನಟ ಪ್ರಕಾಶ್ ರಾಜ್ ಪಕ್ಷೇತರಾಗಿ ಕಣದಲ್ಲಿರುವ ಪ್ರಮುಖರಾಗಿದ್ದಾರೆ.