ಡಿಸಿಎಂ ಭಾಷಣ ಮಾಡುತ್ತಿರುವಾಗಲೇ ಎದ್ದು ನಿಂತ ಕೈ ಪಾಳೆಯದ ಕಾರ್ಯಕರ್ತರು, ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಉಚ್ಛಾಟನೆಗೆ ಆಗ್ರಹ ಮಾಡಿದ ಘಟನೆ ನಡೆದಿದೆ.ಜೆಡಿಎಸ್- ಕಾಂಗ್ರೆಸ್ ಸಮಾವೇಶದಲ್ಲಿ ಒತ್ತಾಯವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಿದ್ದಾರೆ. ಮಂಡ್ಯದ ಎ.ಸಿ. ಮಾದೇಗೌಡ ಸಮುದಾಯ ಭವನದಲ್ಲಿ ಸಮಾವೇಶ ನಡೆಯುತ್ತಿದೆ. ಅಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಭಾಷಣ ಮಾಡುವಾಗ ಕಾರ್ಯಕರ್ತರಿಂದ ಈ ಆಗ್ರಹ ಕೇಳಿಬಂದಿತು.ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಪಕ್ಷದ ಸೂಚನೆ ಪಾಲಿಸ್ತಿಲ್ಲ. ಅವ್ರ ಮೇಲೆ ಕ್ರಮ ಕೈಗೊಳ್ಳಿ. ಪಕ್ಷ ಹೇಳಿದ ಸೂಚನೆ ಕೇಳಬೇಕು. ಇಲ್ಲದಿದ್ದರೆ ಅವರ