ತುಮಕೂರು ಲೋಕಸಭಾ ಅಖಾಡದಲ್ಲಿ ಅಪ್ಪನ ಪರ ಪುತ್ರ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಭರ್ಜರಿ ಪ್ರಚಾರ ನಡೆಸಿದ್ದಾರೆ.ಚುನಾವಣಾ ಪ್ರಚಾರಕ್ಕೆ ಎರಡನೇ ಬಾರಿಗೆ ಜಿಲ್ಲೆಗೆ ಆಗಮಿಸಿದ್ದ ಸಿಎಂ ಕುಮಾರಸ್ವಾಮಿ, ಗ್ರಾಮಾಂತರ, ತಿಪಟೂರು, ತುರುವೇಕೆರೆ ಕ್ಷೇತ್ರಗಳಲ್ಲಿ ದೇವೇಗೌಡರ ಪರ ಮತಬೇಟೆ ನಡೆಸಿ ಅಖಾಡವನ್ನ ರಂಗೇರಿಸಿದ್ದಾರೆ. ಕಲ್ಪತರು ನಾಡು ತುಮಕೂರಿನಲ್ಲಿ ಇಂದು ದೇವೇಗೌಡರ ಪರ ಜೋಡೆತ್ತುಗಳು ಅಬ್ಬರದ ಪ್ರಚಾರ ನಡೆಸಿ, ಮತಬೇಟೆ ನಡೆಸಿದ್ದಾರೆ. ಕುಣಿಗಲ್ನ ಸ್ಟಡ್ ಫಾರ್ಮ್ ಹೆಲಿಪ್ಯಾಡ್ ಗೆ ಹೆಲಿಕಾಪ್ಟರ್ ಮೂಲಕ ಬಂದಿಳಿದ ಸಿಎಂ