ಸಿಂಪಥಿ ಗೈನ್ ಮಾಡೋಕ್ಕೋಗಿ ಜಿಲ್ಲಾಧಿಕಾರಿಗಳ ತೇಜೋವಧೆ ಮಾಡಲು ಹೊರಟಿದ್ದಾರೆ. ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿಸಿ ತಮಗೆ ಬೇಕಾದವರನ್ನ ಹಾಕಿಸಿಕೊಳ್ಳಲು ಪಕ್ಷೇತರ ಅಭ್ಯರ್ಥಿ ಸುಮಲತಾ ಪಿತೂರಿ ನಡೆಸುತ್ತಿದ್ದಾರೆ ಎಂದು ದೂರಲಾಗಿದೆ.ಮಂಡ್ಯದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಸುದ್ದಿಗೋಷ್ಠಿನಡೆಸಿದ್ದು, ಪಕ್ಷೇತರ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿರುವ ಸುಮಲತಾ, ಮೈತ್ರಿ ಅಭ್ಯರ್ಥಿ ಬಗ್ಗೆ ಮಾತನಾಡಿರೋದನ್ನ ಖಂಡಿಸ್ತೇವೆ. ಇಂದಿನ ಕೇಬಲ್ ಕಟ್ ವಿಚಾರಕ್ಕೂ ನಮಗೂ ಯಾವುದೇ ಸಂಬಂದವಿಲ್ಲ. ಕೇಬಲ್ ಕಟ್ ಮಾಡಿಸಲು ನಾವ್ಯಾರು, ಅಂತಹ ರಾಜಕಾರಣ ನಾವು ಮಾಡಲ್ಲ