ಐವತ್ತು ವರ್ಷಗಳಿಂದ ಅವರನ್ನು ಯಾರೂ ಕಟ್ಟಿಹಾಕಿಲ್ಲ. ಆದರೆ ಈ ಬಾರಿ ನಾವು ಅಶ್ವಮೇಧ ಕುದುರೆಯನ್ನು ಕಟ್ಟಿಹಾಕಿದ್ದೇವೆ. ಹೀಗಂತ ಕಮಲ ಪಾಳೆಯದ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಹೇಳಿದ್ದಾರೆ.ಈ ಬಾರಿಯ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅಶ್ವಮೇಧ ಕುದುರೆ ಇದ್ದಹಾಗೆ ಎಂದು ಮಾಜಿ ಸಚಿವ ಬಾಬುರಾವ ಚಿಂಚನಸೂರ ಹೇಳಿದ್ದಾರೆ.ಖರ್ಗೆ ಅವರನ್ನು ಯಾರೂ 50 ವರ್ಷ ಕಟ್ಟಿ ಹಾಕಿಲ್ಲ. ಆದರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಖರ್ಗೆ ಅವರನ್ನು ನಾವು ಕಟ್ಟಿ ಹಾಕಿದ್ದೇವೆ.