ವೋಟ್ ಗಾಗಿ ಬಿಜೆಪಿ-ಕಾಂಗ್ರೆಸ್ ಮಾರಾಮಾರಿ

ಕಲಬುರಗಿ| Jagadeesh| Last Modified ಮಂಗಳವಾರ, 23 ಏಪ್ರಿಲ್ 2019 (15:36 IST)
ಲೋಕಸಭೆ ಚುನಾವಣೆಯ 2 ನೇ ಹಂತದ ಮತದಾನದಲ್ಲಿ ಅಲ್ಲಲ್ಲಿ ಅಹಿತಕರ ಘಟನೆಗಳು ವರದಿಯಾಗುತ್ತಿವೆ.
ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತನ ನಡುವೆ ಮಾರಾಮಾರಿ ನಡೆದಿದೆ.

ಸೇಡಂನ ಮಾತೃಛಾಯಾ ಕಾಲೇಜ್ ಆವರಣದಲ್ಲಿ ಬೂತ್ ವೊಂದರ ಬಳಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಕಾಂಗ್ರೆಸ್ ಗೆ ಮತ ಹಾಕುವಂತೆ ಮನವಿ ಮಾಡಿದ್ದಾನೆ.

ಆಗ ಅಲ್ಲೇ ಇದ್ದ ಬಿಜೆಪಿ ಕಾರ್ಯಕರ್ತನೊಬ್ಬ ಹರಿಹಾಯ್ದಿದ್ದಾನೆ. ಆಗ ಇಬ್ರೂ ಕೈ ಕೈ ಮಿಲಾಯಿಸಿ ಹೊಡೆದಾಡುಕೊಂಡಿದ್ದಾರೆ. ಪಿಎಸ್ವೈ ಸುನೀಲ್ ಕುಮಾರ ಮೂಲಿಮನಿ ನಡುವೆ ಪ್ರವೇಶ ಮಾಡಿ ಪರಿಸ್ಥಿತಿ ಶಾಂತಗೊಳಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :