ದೇವೇಗೌಡ- ಕುಮಾರಸ್ವಾಮಿಯ ನಡುವಿನ ಜಗಳ ಬೀದಿಗೆ ತಂದ ಬಿಜೆಪಿ ಶಾಸಕ

ಬೆಂಗಳೂರು, ಸೋಮವಾರ, 15 ಏಪ್ರಿಲ್ 2019 (10:22 IST)

ಬೆಂಗಳೂರು : ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರನ್ನು ಅವರ ಪುತ್ರ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮನೆಯಿಂದ ಆಚೆಗೆ ಹಾಕಿದ್ದರು ಎಂದು ಚಿಕ್ಕನಾಯಕನಹಳ್ಳಿ ಬಿಜೆಪಿ ಶಾಸಕ ಮಾಧುಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ತಂದೆ, ಮಗನ ನಡುವೆ ಭಿನ್ನಾಭಿಪ್ರಾಯವಾಗಿದ್ದ ಕಾರಣ ಕುಮಾರಸ್ವಾಮಿ ದೇವೇಗೌಡರನ್ನು ಮನೆಯಿಂದ ಹೊರಗೆ ಹಾಕಿದ್ದರು. ಕುಮಾರ ಪಾರ್ಕ್ ಬಳಿ ಬಾಡಿಗೆ ಮನೆಯೊಂದರಲ್ಲಿ ದೇವೇಗೌಡರು ವಾಸವಾಗಿದ್ದರು. ಆಗ ಅವರ ತಂದೆಗೆ ಊಟ ಕೊಟ್ಟಿದ್ದು ನಾವು, ಅವರ ಮಕ್ಕಳಲ್ಲ. ಆದರೆ ಈಗ ತಮ್ಮ ತಂದೆಯನ್ನೇ ಮನೆಯಿಂದ ಹೊರಹಾಕಿದ ಕುಮಾರಸ್ವಾಮಿ ನನ್ನ ಬಗ್ಗೆ ಮಾತನಾಡುತ್ತಾರೆ. ಕುಮಾರಸ್ವಾಮಿ ಈಗ ನನ್ನ ಬಳಿ ಬರಲಿ, ಯಾಕಪ್ಪ ನಿಮ್ಮ ಅಪ್ಪನನ್ನು ಹೊರಗೆ ಹಾಕಿದ್ದೆ ಎಂದು ಅವರಿಗೆ ಕೇಳುತ್ತೇನೆ ಎಂದು  ಮಾಧುಸ್ವಾಮಿ ಕಿಡಿಕಾರಿದ್ದಾರೆ.

 

ದೇವೇಗೌಡರು ಮಾಡುವಾಗ ಕಲ್ಲಲ್ಲಿ ಒಡೆದಿದ್ದರು. ನಾನು ಎದೆ ಕೊಟ್ಟು ನಿಂತಿದ್ದೆ. ಆಗ ಗೌಡರು ನನ್ನನ್ನು ತಬ್ಬಿಕೊಂಡು ಅತ್ತಿದ್ದರು. ನನ್ನ ಮಕ್ಕಳಾಗಿದ್ದರೂ ಈ ರೀತಿ ಏಟು ತಿನ್ನುತ್ತಿರಲಿಲ್ಲ ಎಂದು ಹೇಳಿದ್ದರು. ವಿ.ಎಸ್. ಉಗ್ರಪ್ಪ, ದೇವೇಗೌಡರ ಬೆನ್ನು ಉಜ್ಜುತ್ತಿದ್ದರು. ಗೌಡರ ಮಾನಸಿಕ ಪುತ್ರರೆಂದೇ ಹೇಳಲಾಗಿದ್ದ ಬಿ.ಎಲ್. ಶಂಕರ್ ಪಕ್ಷವನ್ನೇ ಬಿಟ್ಟರು. ಹೀಗೆ ಅನೇಕರು ದೂರವಾಗಿದ್ದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 ಇದರಲ್ಲಿ ಇನ್ನಷ್ಟು ಓದಿ :  

ಲೋಕಸಭಾ ಚುನಾವಣೆ 2019

news

ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಯಿಂದ ಮಹಿಳೆಯರಿಗೆ ವಂಚನೆ

ಬೆಂಗಳೂರು : ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಹಣ ಕೊಡುತ್ತೇನೆ ಎಂದು ಹೇಳಿ ಮಹಿಳೆಯರನ್ನು ಪ್ರಚಾರಕ್ಕೆ ...

news

ಚಿತ್ರದುರ್ಗದ ರ್ಯಾಲಿಯ ವೇಳೆ ಪ್ರಧಾನಿ ಮೋದಿ ತಂದ ಟ್ರಂಕ್ ರಹಸ್ಯ ಬಯಲು

ಚಿತ್ರದುರ್ಗ : ರ್ಯಾಲಿ ವೇಳೆ ಪ್ರಧಾನಿ ಮೋದಿ ಹೆಲಿಕಾಪ್ಟರ್ ನಿಂದ ಇನ್ನೋವಾ ಕಾರಿಗೆ ತುಂಬಿಸಿದ ಟ್ರಂಕ್ ...

news

ಕೈ ನಾಯಕ ರಾಜಣ್ಣ ಪರೋಕ್ಷವಾಗಿ ನಮಗೆ ಬೆಂಬಲ ನೀಡುತ್ತಾರೆ - ಬಿಜೆಪಿ ನಾಯಕರಿಂದ ಅಚ್ಚರಿಯ ಹೇಳಿಕೆ

ತುಮಕೂರು : ಕಾಂಗ್ರೆಸ್ ಮಾಜಿ ಶಾಸಕ ಕೆಎನ್ ರಾಜಣ್ಣ ಅವರು ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ನಮಗೆ ಬೆಂಬಲ ...

news

ಸುಮಲತಾ ನನ್ನ ಹೆಸರು ಬಳಸಿಕೊಂಡರೆ ತಕ್ಕ ಶಾಸ್ತಿ ಮಾಡಿ ಎಂದ ಸಿದ್ಧರಾಮಯ್ಯ

ಮೈಸೂರು : ಮಂಡ್ಯ ಲೋಕಸಭೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ನನ್ನ ಹೆಸರು ಬಳಸಿಕೊಂಡರೆ ತಕ್ಕ ಶಾಸ್ತಿ ...