ಚುನಾವಣೆ ಮುಗಿಯೋವರ್ಗೂ ಸುಮ್ನೆ ಇರ್ತಿನಿ ಅಂತ ಬಿಜೆಪಿ ಶಾಸಕ ಹೇಳಿದ್ಯಾಕೆ?

ವಿಜಯಪುರ, ಬುಧವಾರ, 17 ಏಪ್ರಿಲ್ 2019 (15:38 IST)

ಲೋಕಸಭಾ ಚುನಾವಣೆ ಮುಗಿಯುವವರೆಗೂ ಎಂ.ಬಿ.ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ. ಎಲೆಕ್ಷನ್ ಮುಗಿಯೋವರ್ಗೂ ಸುಮ್ನೆ ಇರ್ತೀನಿ. ಹೀಗಂತ ಹೇಳಿದ್ದಾರೆ.

ಮುದ್ದೇಬಿಹಾಳ ಕ್ಷೇತ್ರದ ಬಿಜೆಪಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಹಾಗೂ ಗೃಹ ಸಚಿವ ಎಂ.ಬಿ.ಪಾಟೀಲ್ ನಡುವಿನ ‌ವಾಗ್ವಾದಕ್ಕೆ ತೆರೆ ಎಳೆದಿದ್ದಾರೆ ಶಾಸಕ ನಡಹಳ್ಳಿ.

ಲೋಕಸಭಾ ಚುನಾವಣೆ ಮುಗಿಯುವವರೆಗೂ ಯಾರು ಏನೇ ಟೀಕೆ ಮಾಡಿದರೂ ಪ್ರತ್ಯೂತ್ತರ ನೀಡಲ್ಲ ಎಂದು ಶಾಸಕ ನಡಹಳ್ಳಿ ಹೇಳಿದ್ದಾರೆ.

ಈ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಮತ ಹಾಕಿಸುವ ಮೂಲಕ ವಿರೋಧಿಗಳಿಗೆ ಪಾಠ ಕಲಿಸುವದಾಗಿ ಹೇಳಿದ ನಡಹಳ್ಳಿ, ನನ್ನ ಮೇಲೆ ಎಂ.ಬಿ.ಪಾಟೀಲ್ ಬೆಂಬಲಿಗರು ಹಲ್ಲೆಗೆ ಯತ್ನ ನಡೆಸಿದ್ದರು. ಇದನ್ನು ನನ್ನ ಅಭಿಮಾನಿಗಳು, ಬೆಂಬಲಿಗರು ಯಾರೂ ಗಂಭೀರವಾಗಿ ಪರಿಗಣಿಸಬಾರದು. ಇಂದಿನಿಂದ ಲೋಕಸಭಾ ಚುನಾವಣೆಯ ಮತದಾನ ಮುಗಿಯುವವರೆಗೂ ಆ ಘಟನೆ ಕುರಿತು ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅವರು ಏನೇ ಟೀಕೆ ಮಾಡಿದರೂ ನನ್ನ ಬಗ್ಗೆ ಏನೇ ಅಂದರೂ ಚುನಾವಣೆ ಮಗಿಯುವವರೆಗೆ ಸಹಿಸಿಕೊಳ್ಳುತ್ತೇನೆ ಎಂದರು.

ನನ್ನ ಅನುಯಾಯಿಗಳು, ಬೆಂಬಲಿಗರು ನನ್ನ ತೀರ್ಮಾನದಂತೆ ನಡೆದುಕೊಳ್ಳಬೇಕು ಎಂದು ನಡಹಳ್ಳಿ ಮನವಿ ಮಾಡಿದ್ದಾರೆ.


 ಇದರಲ್ಲಿ ಇನ್ನಷ್ಟು ಓದಿ :  

ಲೋಕಸಭಾ ಚುನಾವಣೆ 2019

news

ಎಲೆಕ್ಷನ್ ಆದ್ಮೇಲೆ ಕಾಂಗ್ರೆಸ್ ನವರ ಅಡ್ರೆಸ್ ಇರಲ್ಲ…

ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್ ನವರ ಅಡ್ರೆಸ್ ಇರಲ್ಲ. ಚುನಾವಣೆಯಲ್ಲಿ ಕೈ ನಾಯಕರಿಗೆ ಜನರು ತಕ್ಕ ಪಾಠ ...

news

ನಾಳೆ ಚಿಕ್ಕೊಡಿಗೆ ಮೋದಿ ಆಗಮನ

ಚುನಾವಣೆ ಪ್ರಚಾರಕ್ಕೆ ಮೋದಿ ಗಡಿ ಜಿಲ್ಲೆಗೆ ಪ್ರವಾಸ ಕೈಗೊಂಡಿದ್ದಾರೆ.

news

ಮತದಾರರಿಗೆ ಮಂಜುನಾಥನ ಫೊಟೋ ಕೊಟ್ಟು ಆಣೆ ಮಾಡಿಸ್ತಿದ್ದಾರೆ- ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ವಿರುದ್ಧ ಆರೋಪ

ಬೆಂಗಳೂರು : ಮತದಾರರನ್ನು ಕಟ್ಟಿ ಹಾಕಲು ಜೆಡಿಎಸ್ ಆಣೆ-ಪ್ರಮಾಣದ ಗಿಮಿಕ್ ಮಾಡುತ್ತಿದ್ದಾರೆ ಎಂದು ಸಾಮಾಜಿಕ ...

news

ಕಾಂಗ್ರೆಸ್ ಗೆ ಯಾರು ಮತ ಚಲಾಯಿಸುತ್ತಾರೆ ಎಂಬುದು ಪ್ರಧಾನಿ ಮೋದಿಗೆ ತಿಳಿಯುತ್ತದೆ- ಬಿಜೆಪಿ ಶಾಸಕನಿಂದ ವಿವಾದಾತ್ಮಕ ಹೇಳಿಕೆ

ಗುಜರಾತ್ : ಕಾಂಗ್ರೆಸ್ ಮತ ಚಲಾಯಿಸಿದರೆ ಪ್ರಧಾನಿ ಮೋದಿ ತಿಳಿಯುತ್ತದೆ ಎಂದು ಗುಜರಾತ್ ಬಿಜೆಪಿ ಶಾಸಕ ರಮೇಶ್ ...