ಬಿಜೆಪಿ ಅವರಿಗೆ ಹೇಳಿಕೊಳ್ಳೋಕೆ ಏನೂ ಇಲ್ಲ. ಹೀಗಾಗಿ ಬರೀ ಸುಳ್ಳು ಹೇಳಿಕೊಂಡೇ ಹೋಗಬೇಕು. ಮುಖ ಮುಚ್ಚಿಕೊಂಡೇ ಪ್ರಚಾರ ನಡೆಸ್ತಿದ್ದಾರೆ ಅಂತ ಕೆಪಿಸಿಸಿ ಅಧ್ಯಕ್ಷ ವ್ಯಂಗ್ಯವಾಡಿದ್ದಾರೆ.ಶ್ರೀರಾಮಪುರದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭಾಗಿಯಾಗಿ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.ಬಿಜೆಪಿಯವರ ಮುಖ ಮುಚ್ಚಿಕೊಂಡು ಪ್ರಚಾರ ಮಾಡ್ತಿದ್ದಾರೆ. ಅಂಬೇಡ್ಕರ್ ಸಂವಿಧಾನವನ್ನೇ ಬದಲಾಯಿಸ್ತೇವೆ ಅಂತಾರೆ. ದಲಿತರು, ಅಲ್ಪಸಂಖ್ಯಾತರ ಬಗ್ಗೆ ಕಾಳಜಿಯೇ ಇಲ್ಲ. ಅಂತವರು ಹೇಗೆ ಜನರ ಮನವನ್ನ ಗೆದ್ದಾರು? ಎಂದು