ಬೆಂಗಳೂರು: ಚುನಾವಣಾ ಆಯೋಗದವರು ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.ಸಿಎಂ ಕುಮಾರಸ್ವಾಮಿ ಪ್ರಜ್ವಲ್ ರೇವಣ್ಣ ಪರ ಹಾಸನದಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗುವ ವೇಳೆ ಚುನಾವಣಾಧಿಕಾರಿಗಳು ಅವರ ಕಾರನ್ನು ತಡೆಹಿಡಿದು ಮಾಮೂಲಾಗಿ ತಪಾಸಣೆ ನಡೆಸಿದ್ದಾರೆ.ಈ ಘಟನೆ ಬೆನ್ನಲ್ಲೇ ಸಿಎಂ ಕಿರುಕುಳದ ಆರೋಪ ಮಾಡಿದ್ದಾರೆ. ಚುನಾವಣಾಧಿಕಾರಿಗಳು ಬೇಕೆಂದೇ ನನ್ನನ್ನೇ ಟಾರ್ಗೆಟ್ ಮಾಡಿದ್ದಾರೆ. ಇದರಿಂದ ಅವರಿಗೆ ಏನು ಸಿಗುತ್ತದೋ ನನಗೆ ಗೊತ್ತಿಲ್ಲ. ಆದರೂ ಪದೇ