ಕೋಲಾರ : ಇಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಇದೀಗ ಕೋಲಾರದ ಮತಗಟ್ಟೆಯೊಂದರ ಬಳಿ ಹಣ ಹಂಚಿಕೆಯ ಪ್ರಕರಣ ನಡೆದಿರುವುದಾಗಿ ತಿಳಿದುಬಂದಿದೆ. ಕಾಂಗ್ರೆಸ್ ಕಾರ್ಯಕರ್ತ ಪುಣ್ಯಮೂರ್ತಿ ಎಂಬುವವರು ಕೆಜಿಎಫ್ ನ ಸ್ವರ್ಣ ನಗರಮತಗಟ್ಟೆ ಸಂಖ್ಯೆ 22ರಲ್ಲಿ ಮತದಾರರಿಗೆ ಹಣ ಹಂಚಿಕೆ ಮಾಡುತ್ತಿದ್ದರು. ಈ ಘಟನೆ ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಾಹಿತಿ ತಿಳಿದ ಪೊಲೀಸರು ತಕ್ಷಣ ಹಣ ಹಂಚಿಕೆ ಮಾಡುತ್ತಿದ್ದ