ಕೇಂದ್ರ ಸಚಿವೆಯ ಗುಣಗಾನ ಮಾಡಿದ ಕಾಂಗ್ರೆಸ್ ನಾಯಕ ಶಶಿತರೂರ್

ನವದೆಹಲಿ, ಬುಧವಾರ, 17 ಏಪ್ರಿಲ್ 2019 (11:12 IST)

ನವದೆಹಲಿ : ಕಾಂಗ್ರೆಸ್ ನಾಯಕ ಶಶಿತರೂರ್ ಅವರು ತಮ್ಮ ಟ್ವೀಟರ್ ನಲ್ಲಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಹಾಡಿ ಹೊಗಳಿದ್ದಾರೆ.


ಹೌದು. ಲೋಕಸಭಾ ಚುನಾವಣೆಯಲ್ಲಿ ಕೇರಳದ ತಿರುವನಂತಪುರಂ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶಶಿತರೂರ್ ಅವರು ದೇವಾಲಯವೊಂದರಲ್ಲಿ ತುಲಾಭಾರ ಮಾಡಿಸಿಕೊಳ್ಳುವಾಗ ತಕ್ಕಡಿ ಮುರಿದು ಬಿದ್ದ ಕಾರಣ ತಲೆ ಏಟಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.


ಈ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್ ನಾಯಕ ಶಶಿತರೂರ್ ಅವರ ನೋಡಲು  ಮಧ್ಯೆ ಪ್ರವಾಸ ಕೈಗೊಂಡಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಶಶಿ ತರೂರ್, ಬಿಡುವಿಲ್ಲದ ಚುನಾವಣಾ ಕಾರ್ಯಕ್ರಮಗಳ ನಡುವೆಯೂ ನಿರ್ಮಲಾ ಸೀತಾರಾಮನ್ ಅವರು ಭೇಟಿ ಮಾಡಿರುವುದು ನನ್ನ ಹೃದಯ ತುಂಬಿ ಬಂದಿದೆ. ಭಾರತೀಯ ರಾಜಕಾರಣದಲ್ಲಿ ನಾಗರಿಕತೆ ಎನ್ನುವುದು ಅಪರೂಪವಾಗುತ್ತಿರುವ ಮಧ್ಯೆ ನಿರ್ಮಲಾ ಸೀತಾರಾಮನ್ ಅವರ ನಡೆ ಮಾದರಿಯಾದದ್ದು ಎಂದು ಹಾಡಿ ಹೊಗಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

 ಇದರಲ್ಲಿ ಇನ್ನಷ್ಟು ಓದಿ :  

ಲೋಕಸಭಾ ಚುನಾವಣೆ 2019

news

ಮೋದಿ ಸಾಧನೆ ಹೇಳುವವರಿಗೆ ನಿಮ್ಮ ಗಲ್ಲಿಯ ಸಾಧನೆ ತೋರಿಸಿ ಓಡಿಸಿ- ಮತದಾರರಿಗೆ ಇಕ್ಬಾಲ್ ಅನ್ಸಾರಿಯಿಂದ ಸಲಹೆ

ಕೊಪ್ಪಳ : ಯಾರು ಯಾರು ನಿಮ್ಮ ಓಣಿಯಲ್ಲಿ ಬಂದು ಮೋದಿ ಸಾಧನೆ ಎಂದು ಹೇಳುತ್ತಾರೋ ಅವರಿಗೆ ನಿಮ್ಮ ಗಲ್ಲಿಯ ...

news

ಮತದಾನ ಮಾಡುವವರಿಗೆ ಇಲ್ಲಿ ಸಿಗುತ್ತಿದೆ ಬಂಪರ್ ಆಫರ್

ಬೆಂಗಳೂರು : ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಕೇವಲ ಸರ್ಕಾರ ಮಾತ್ರವಲ್ಲದೇ ಕೆಲವು ಜನರು ಹಾಗೂ ...

news

ವಿಜಯ್ ಮಲ್ಯ, ನೀರವ್ ಮೋದಿಯಂತೆ ಭಾರತದ ಬ್ಯಾಂಕ್ ಗಳಿಗೆ ವಂಚಿಸಿ ಪರಾರಿಯಾದವರು ಇನ್ನೆಷ್ಟು ಮಂದಿ ಇದ್ದಾರೆ ಗೊತ್ತಾ?

ನವದೆಹಲಿ : ಭಾರತದ ಬ್ಯಾಂಕ್ ಗಳಿಗೆ ಸಾಲ ಮರುಪಾವತಿ ಮಾಡದೇ ವಂಚಿಸಿ ವಿದೇಶಕ್ಕೆ ಪರಾರಿಯಾದವರು ಬರೀ ವಿಜಯ್ ...

news

ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ನಿಗದಿ ಮಾಡಿದ ಚುನಾವಣಾ ಆಯೋಗ

ಚಿಂಚೋಳಿ : ಕಾಂಗ್ರೆಸ್ ಶಾಸಕರಾಗಿದ್ದ ಡಾ. ಉಮೇಶ್ ಜಾಧವ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಕರ್ನಾಟಕದ ...