ಖರ್ಗೆ ಹಣ, ಹೆಂಡ ಹಂಚುತ್ತಿದ್ದಾರೆ ಎಂದೋರಾರು?

ಕಲಬುರಗಿ, ಸೋಮವಾರ, 22 ಏಪ್ರಿಲ್ 2019 (15:26 IST)

ಇದುವರೆಗೆ ಮ್ಯಾಚ್ ಫಿಕ್ಸಿಂಗ್ ನಲ್ಲಿ ಗೆಲ್ಲುತ್ತಿದ್ದ ಮಲ್ಲಿಕಾರ್ಜುನ ಖರ್ಗೆ ಈ ಬಾರಿ ಹೀನಾಯವಾಗಿ ಸೋಲಲಿದ್ದಾರೆ. ಹೆಂಡ ಮತ್ತು ಹಣವನ್ನು ಹಂಚುವ ಕೆಲಸವನ್ನು ಖರ್ಗೆ ಹಾಗೂ ಅವರ ಮಗ ಪ್ರಿಯಾಂಕ ಖರ್ಗೆ ಮಾಡುತ್ತಿದ್ದಾರೆ. ಹೀಗಂತ ವಿಧಾನ ಪರಿಷತ್ ಸದಸ್ಯರೊಬ್ಬರು ಮಾಡಿದ್ದಾರೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಎಂಎಲ್ಸಿ ಎನ್.ರವಿಕುಮಾರ್ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ್ದು, ಕಲಬುರಗಿಯಲ್ಲಿ ಬಿಜೆಪಿ ಅಭ್ಯರ್ಥಿ 1 ಲಕ್ಷ ಮತ ಅಂತರಗಳಲ್ಲಿ ಗೆಲ್ಲಲಿದ್ದಾರೆ ಎಂದರು.

ಇನ್ನು ಕಾಂಗ್ರೆಸ್ ನವರು ಕನಿಷ್ಟ 100  ಕೋಟಿ ‌ರೂ. ಖರ್ಚು ಮಾಡುತ್ತಿದ್ದಾರೆ ಎಂದು ದೂರಿದ್ರು. ಕೋಳಿ‌ ಸಮಾಜ ಎಸ್ಟಿ ‌ಸಮುದಾಯಕ್ಕೆ ಸೇರಿಸಲು ಭರವಸೆಯನ್ನ ನಾವು ನೀಡಿದ್ದೇವೆ. 2 ತಿಂಗಳಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಬಳಿಕ ಸೇರ್ಪಡೆ ಕೆಲಸ ಮಾಡಲಾಗುತ್ತದೆ ಎಂದರು.

ನನ್ನನ್ನ ಸೋಲಿಸೋಕೆ ಬಿಜೆಪಿ ‌ಗಂಟು ತಿಂದಿದ್ದೇನಾ ಎಂದು ಖರ್ಗೆ ಹೇಳಿದ್ದಾರೆ. ಇದಕ್ಕೆ ಟಾಂಗ್ ನೀಡಿದ ರವಿಕುಮಾರ್, ಕಲಬುರಗಿ ಜನರ ಗಂಟನ್ನು ತಿಂದಿದ್ದಾರೆ. ಹೀಗಾಗಿ ಕಲಬುರಗಿ ಜನ ಖರ್ಗೆಗೆ ವಿಶ್ರಾಂತಿ ನೀಡಲು ತೀರ್ಮಾನಿಸಿದ್ದಾರೆ ಎಂದಿದ್ದಾರೆ. ಸೋಲಿನ ಭೀತಿಯಲ್ಲಿ ಖರ್ಗೆ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಲೋಕಸಭಾ ಚುನಾವಣೆ 2019

news

ಸಿಎಂ ಕುಮಾರಸ್ವಾಮಿಗೆ ನಟ ಯಶ್ ವಾರ್ನಿಂಗ್?

ಲೋಕಸಭೆ ಚುನಾವಣೆಯಲ್ಲಿ ಅಂಬರೀಶ್ ಅಣ್ಣನ ಮೇಲಿನ ಪ್ರೀತಿಯಿಂದಾಗಿ ಸುಮಲತಾ ಅಮ್ಮನವರ ಪರ ಪ್ರಚಾರಕ್ಕೆ ...

news

ನೀವು ನನಗೆ ವೋಟ್ ಮಾಡದಿದ್ದರೂ ನಾನು ನಿಮ್ಮ ಕೆಲಸ ಮಾಡುವೆ ಎಂದ ವರುಣ್ ಗಾಂಧಿ

ನವದೆಹಲಿ: ನೀವು ನನಗೆ ವೋಟ್ ಮಾಡದಿದ್ದರೂ ನಾನು ನಿಮ್ಮ ಪರವಾಗಿ ಕೆಲಸ ಮಾಡುವೆ ಎಂದು ಬಿಜೆಪಿ ನಾಯಕ ವರುಣ್ ...

news

ನನಗೆ ಮಂಡ್ಯವೇ ಸಿಂಗಾಪುರ ಎಂದು ತಿರುಗೇಟು ಕೊಟ್ಟ ಸುಮಲತಾ ಅಂಬರೀಶ್

ಮಂಡ್ಯ: ತಾವು ಸಿಂಗಾಪುರಕ್ಕೆ ಹೋಗುವ ವಿಚಾರ ಕೆದಕಿ ಟಾಂಗ್ ಹೊಡೆದಿದ್ದ ಜೆಡಿಎಸ್ ನಾಯಕರಿಗೆ ಸುಮಲತಾ ...

news

ಎರಡು ದಿನಕ್ಕೆ ಸಿಎಂ ಕುಮಾರಸ್ವಾಮಿ ರೆಸ್ಟ್

ಬೆಂಗಳೂರು: ಸತತ ರಾಜಕೀಯದಿಂದ ಸುಸ್ತಾಗಿರುವ ಸಿಎಂ ಕುಮಾರಸ್ವಾಮಿ ಇದೀಗ ವಿಶ್ರಾಂತಿಯ ಮೊರೆ ಹೋಗಲಿದ್ದಾರೆ.