ಮೋದಿ ತನ್ನನ್ನು ತಾನೇ ಚೌಕಿದಾರ್ ಎಂದು ಸ್ವಯಂಘೋಷಿತ ಬಿರುದನ್ನು ಹಾಕಿಕೊಂಡಿದ್ದಾರೆಯೇ ಹೊರತು ರಾಷ್ಟ್ರಪತಿಗಳು ಮೋದಿಗೆ ಚೌಕಿದಾರ್ ಎಂದು ಬಿರುದು ಕೊಟ್ಟಿಲ್ಲ. ಮೋದಿ ಚೌಕಿದಾರ್ ಅಲ್ಲ.ಅವರೊಬ್ಬ ಭ್ರಷ್ಟಾಚಾರದಲ್ಲಿ ಭಾಗಿದಾರ್ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಟೀಕಿಸಿದ್ದಾರೆ.ಕೋಲಾರದಲ್ಲಿ ನಡೆದ ಪರಿವರ್ತನಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಎಲ್ಲಿಯೂ ಹಿಂದೆ ತಾವು ನೀಡಿದ ಭರವಸೆಗಳ ಬಗ್ಗೆಯಾಗಲಿ, ಮುಂದೆ ದೇಶಕ್ಕಾಗಿ ಏನು