ರಾಜಕೀಯ ಜೀವನದಲ್ಲಿ ನಾನು ಹುಟ್ಟು ಹೋರಾಟಗಾರ. ನಿಮ್ಮನ್ನೆಲ್ಲ ಮುಂದೆ ತೆಗೆದುಕೊಂಡು ಹೋಗುವ ಆತ್ಮವಿಶ್ವಾಸವಿದೆ. ಹೀಗಂತ ಮಾಜಿ ಪ್ರಧಾನಿ ಹಾಗೂ ತುಮಕೂರಿನ ಜೆಡಿಎಸ್ ಅಭ್ಯರ್ಥಿ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ.ತುಮಕೂರಿನಲ್ಲಿ ಮಡಿವಾಳ ಜನಾಂಗದ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ನಾಯಕರ ಒತ್ತಾಯದ ಮೇರೆಗೆ ತುಮಕೂರಿನಲ್ಲಿ ಸ್ಪರ್ಧಿಸುತ್ತಿದ್ದೇನೆ. ತುಮಕೂರಿನಲ್ಲಿ ನಾನು ನೋಡಿದ ಹಾಗೆ 29 ಸಣ್ಣ ಸಣ್ಣ ಸಮುದಾಯಗಳಿವೆ. ಹಿಂದುಳಿದವರು, 21 ಸಣ್ಣಜಾತಿಗಳಿಗೆ ಗ್ರಾಮಪಂಚಾಯಿತಿ, ತಾಲೂಕು ಪಂಚಾಯಿತಿ, ನಗರಸಭೆ ಗಳಲ್ಲಿ ರಿಸರ್ವೇಶನ್ ತಂದಿದ್ದು ಯಾರು..?