ರಾಹುಲ್ ಗಾಂಧಿ ಅವರ ಮುತ್ತಾತ ಹೇಳಿದ್ದು ಗರೀಬಿ ಹಠಾವೋ, ಅವರ ಅಜ್ಜಿ ಹೇಳಿದ್ದು ಗರೀಬಿ ಹಠಾವೋ, ಆದರೆ ಕಾಂಗ್ರೆಸ್ ಗೆ ಬಡವರು ಚುನಾವಣಾ ಸರಕು ಆಗಿದ್ದಾರೆ. ಬಡವರ ಹೆಸರಿನಲ್ಲಿ ಕಾಂಗ್ರೆಸ್ ತನ್ನ ಬಡತನವನ್ನ ನಿವಾರಿಸಿಕೊಂಡಿದೆ ಅಂತ ಬಿಜೆಪಿ ಮುಖಂಡ ಕಿಡಿಕಾರಿದ್ದಾರೆ.ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸಿ.ಟಿ.ರವಿ ಹೇಳಿಕೆ ನೀಡಿದ್ದು, ರಾಹುಲ್ ಗಾಂಧಿ ನಡೆದಾಡುವ ಸುಳ್ಳಿನ ಯಂತ್ರವಾಗಿದ್ದಾರೆ. ಕಾಂಗ್ರೆಸ್ ಬದುಕಿಸಿಕೊಳ್ಳಲು ಕೊಟ್ಟಿರುವ ಆಶ್ವಾಸನೆ ನ್ಯಾಯ್ ಯೋಜನೆ. ಎಲ್ಲ ಕಾಲದಲ್ಲೂ ಮೂರ್ಖರನ್ನು ಮಾಡಲು ಆಗೋದಿಲ್ಲ.