ಬೆಂಗಳೂರು: ಪದೇ ಪದೇ ತಾನು ರಾಜಕೀಯಕ್ಕೆ ಬರುವುದಿಲ್ಲ ಎಂದರೂ ಶಿವರಾಜ್ ಕುಮಾರ್ ಹೆಸರು ಯಾವುದಾದರೂ ಒಂದು ಕಾರಣಕ್ಕೆ ರಾಜಕಾರಣದಲ್ಲಿ ಕೇಳಿಬರುತ್ತದೆ.ಇದೀಗ ಶಿವರಾಜ್ ಕುಮಾರ್ ನೀಡಿದ ಹೇಳಿಕೆಯೊಂದಕ್ಕೆ ಪತ್ನಿ ಗೀತಾ ಸಹೋದರನೂ ಆಗಿರುವ ಕುಮಾರ್ ಬಂಗಾರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದು, ಶಿವರಾಜ್ ಕುಮಾರ್ ಕವಚ ತೆಗೆದಿಟ್ಟು ರಾಜಕೀಯಕ್ಕೆ ಬರಲಿ ಎಂದು ವ್ಯಂಗ್ಯ ಮಾಡಿದ್ದಾರೆ.ಜೆಡಿಎಸ್ ನಿಂದ ಗೀತಾ ಶಿವರಾಜ್ ಕುಮಾರ್ ಸಹೋದರ ಮಧು ಬಂಗಾರಪ್ಪ ಶಿವಮೊಗ್ಗ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಮಧು ಬಂಗಾರಪ್ಪ ಪರ