ಐಪಿಎಲ್ ಹೆಸರಿನಲ್ಲಿ ವಿಪಕ್ಷಗಳಿಗೆ ಟಾಂಗ್ ಕೊಟ್ಟ ಪ್ರಧಾನಿ ಮೋದಿ

ನವದೆಹಲಿ, ಶನಿವಾರ, 4 ಮೇ 2019 (08:06 IST)

ನವದೆಹಲಿ: ಲೋಕಸಭೆ ಚುನಾವಣಾ ಕಣದಲ್ಲಿ ಇಷ್ಟು ದಿನ ಕೇವಲ ರಾಜಕೀಯ ವಿಚಾರವಾಗಿ ವಿಪಕ್ಷಗಳಿಗೆ ಟಾಂಗ್ ಕೊಡುತ್ತಿದ್ದ ಪ್ರಧಾನಿ ಮೋದಿ ಇದೀಗ ಭಾರತದ ಯುವಜನರ ಮೆಚ್ಚಿನ ಕ್ರೀಡೆ ಐಪಿಎಲ್ ಕೂಟದ ಬಗ್ಗೆ ಮಾತನಾಡಿದ್ದಾರೆ.
 


ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಕಾಲಾವಧಿಯಲ್ಲಿ ಅಂದರೆ 2009 ರಲ್ಲಿ ಲೋಕಸಭೆ ಚುನಾವಣೆ ನಡೆಯುವಾಗ ಭಾರತದಲ್ಲಿ ಐಪಿಎಲ್ ಆಯೋಜಿಸಲು ಸಾಧ್ಯವಿಲ್ಲ ಎಂದು ಅಂದಿನ ಯುಪಿಎ ಸರ್ಕಾರ ಹೇಳಿದ್ದಕ್ಕೆ ಬಿಸಿಸಿಐ ಇದನ್ನು ದ. ಆಫ್ರಿಕಾದಲ್ಲಿ ಆಯೋಜಿಸಿದ್ದನ್ನು ಪ್ರಸ್ತಾಪಿಸಿ ಮೋದಿ ಕಾಂಗ್ರೆಸ್ ಗೆ ಟಾಂಗ್ ನೀಡಿದ್ದಾರೆ.
 
‘ಯುಪಿಎ ಕಾಲಾವಧಿಯಲ್ಲಿ ಐಪಿಎಲ್ ನ್ನೂ ಚುನಾವಣೆ ನೆಪದಲ್ಲಿ ವಿದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಮೋದಿಗೆ ಐಪಿಎಲ್ ಮತ್ತು ಲೋಕಸಭೆ ಚುನಾವಣೆ ಎರಡನ್ನೂ ಭಾರತದಲ್ಲೇ ಏಕಕಾಲಕ್ಕೆ ಆಯೋಜಿಸುವ ತಾಕತ್ತು ಇದೆ’ ಎಂದು ಪ್ರಧಾನಿ ಮೋದಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದಾರೆ.  ಈ ಮೂಲಕ ಐಪಿಎಲ್ ಹೆಸರಿನಲ್ಲಿ ವಿಪಕ್ಷಗಳಿಗೆ ಟಾಂಗ್ ಕೊಟ್ಟಿದ್ದಾರೆ.
 
ಯುಪಿಎಗೆ ಭದ್ರತೆಯ ಭಯವಿತ್ತು. ಅದಕ್ಕೇ ಆವತ್ತು ಐಪಿಎಲ್ ಆಯೋಜಿಸಲೂ ಹಿಂದೇಟು ಹಾಕಿದರು. ಆದರೆ ನಾವು ಹಾಗಲ್ಲ, ದೇಶದಲ್ಲಿ ರಾಮ ನವಮಿ ಇರಲಿ, ನವರಾತ್ರಿ ಇರಲಿ, ರಂಜಾನ್ ಬರಲಿ. ಎಲ್ಲವೂ ಅದರ ಪಾಡಿಗೆ ನಡೆಯುತ್ತದೆ ಎಂದು ಮೋದಿ ವ್ಯಂಗ್ಯ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಲೋಕಸಭಾ ಚುನಾವಣೆ 2019

news

ಸನ್ನಿ ಲಿಯೋನ್ ಬರಲಿ, ಸನ್ನಿ ಡಿಯೋಲ್ ಇರಲಿ ನಮ್ಮನ್ನು ಯಾರೂ ಏನೂ ಮಾಡಕ್ಕಾಗಲ್ಲ!

ನವದೆಹಲಿ: ಈ ಬಾರಿ ಪಂಜಾಬ್ ನ ಗುರುದಾಸಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಚಿತ್ರನಟ ಸನ್ನಿ ...

news

ಪ್ರಧಾನಿ ಮೋದಿ, ರಾಹುಲ್ ಗಾಂಧಿ ಹಣೆಬರಹ ಇಂದು ನಿರ್ಧರಿಸಲಿರುವ ಚುನಾವಣಾ ಆಯೋಗ

ನವದೆಹಲಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮತ್ತು ...

news

ಬಿಜೆಪಿ ಪರ ಪ್ರಚಾರ ಮಾಡಿದ್ದಕ್ಕೆ ನಾಯಿಯನ್ನು ಬಂಧಿಸಿದ ಚುನಾವಣಾಧಿಕಾರಿಗಳು

ಮುಂಬೈ: ಬಿಜೆಪಿ ಪರ ಪ್ರಚಾರ ಮಾಡಿದ್ದಕ್ಕೆ ಮಹಾರಾಷ್ಟ್ರದ ಚುನಾವಣಾಧಿಕಾರಿಗಳು ನಾಯಿಯೊಂದನ್ನು ಮಾಲಿಕನ ಸಮೇತ ...

news

ರಾಹುಲ್ ಗಾಂಧಿ ಅಮೇಥಿಯಲ್ಲಿ ಸೋತರೆ ನಾನು ರಾಜಕೀಯ ನಿವೃತ್ತಿ ಹೇಳುವೆ ಎಂದವರಾರು ಗೊತ್ತೇ?!

ನವದೆಹಲಿ: ಒಂದು ವೇಳೆ ಅಮೇಥಿಯಲ್ಲಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿ ಸೋತರೆ ...