ಭೋಪಾಲ್ : ಪ್ರಧಾನಿ ಮೋದಿ ಈ ಹಿಂದೆ ಗುಜರಾತ್ ಹತ್ಯಾಕಾಂಡದ ಬಳಿಕ ಸಿಎಂ ಆಗಿದ್ದ ವೇಳೆ ಅವರನ್ನು ಪಕ್ಷದಿಂದಲೇ ವಜಾಗೊಳಿಸಲು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಿದ್ಧತೆ ನಡೆಸಿದ್ದರು ಎಂದು ಬಿಜೆಪಿ ಮಾಜಿ ನಾಯಕ ಯಶವಂತ್ ಸಿನ್ಹಾ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಶವಂತ್ ಸಿನ್ಹಾ, 2002 ರಲ್ಲಿ ಗೋವಾದಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ಅಟಲ್ ಜೀ,ಮೋದಿ ರಾಜೀನಾಮೆ ನೀಡದಿದ್ದರೆ ಅವರ ಸರ್ಕಾರವನ್ನೇ ವಜಾಗೊಳಿಸುವ ನಿರ್ಧಾರ