ಬೆಂಗಳೂರು: ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅಭಿನಂದನೆ ಸಲ್ಲಿಸಲು ಹೋಗಿ ಟ್ರೋಲ್ ಗೊಳಗಾಗಿದ್ದಾರೆ. ಬಿಜೆಪಿ ಅಧಿಕಾರಕ್ಕೇರಿದ್ದಕ್ಕೆ ಟ್ವೀಟ್ ಮಾಡಿದ ರಮ್ಯಾ ನರೇಂದ್ರ ಮೋದಿಯವರಿಗೆ ಮತ್ತು ಬಿಜೆಪಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದರು. ರಮ್ಯಾ ಹೀಗೆ ಬರೆದಿದ್ದಕ್ಕೆ ಟ್ರೋಲ್ ಮಾಡಿರುವ ಟ್ವಿಟರಿಗರು ಕೊನೆಗೂ ಒಂದು ಅರ್ಥವಿರುವ ಟ್ವೀಟ್ ಮಾಡಿದ್ದೀರಲ್ಲಾ ಎಂದು ಟಾಂಗ್ ಕೊಟ್ಟಿದ್ದಾರೆ. ಇನ್ನು ಕೆಲವರು ನಿಮ್ಮಂಥವರು