ಮಂಡ್ಯ: ತಾವು ಸಿಂಗಾಪುರಕ್ಕೆ ಹೋಗುವ ವಿಚಾರ ಕೆದಕಿ ಟಾಂಗ್ ಹೊಡೆದಿದ್ದ ಜೆಡಿಎಸ್ ನಾಯಕರಿಗೆ ಸುಮಲತಾ ಅಂಬರೀಶ್ ತಿರುಗೇಟು ನೀಡಿದ್ದಾರೆ. ತಮಗೆ ಚುನಾವಣೆಯಲ್ಲಿ ನೆರವು ನೀಡಿದವರಿಗೆ ಕೃತಜ್ಞತೆ ಸಲ್ಲಿಸಲು ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಮಲತಾ ಅಂಬರೀಶ್ ನಾನು ರಾಜಕೀಯಕ್ಕಾಗಿ ಮಂಡ್ಯಕ್ಕೆ ಬರಲಿಲ್ಲ. ಮಂಡ್ಯಕ್ಕಾಗಿ ರಾಜಕೀಯಕ್ಕೆ ಬಂದೆ. ನನಗೆ ಮಂಡ್ಯವೇ ಸಿಂಗಾಪುರ. ಮಂಡ್ಯದ ಹೊರತಾಗಿ ನಾನು ಬೇರೆ ಎಲ್ಲಿ ಹೋಗಲಿ? ಎಂದು ತಿರುಗೇಟು ನೀಡಿದ್ದಾರೆ.ಅಲ್ಲದೆ, ತಮಗೆ ಚುನಾವಣೆ ಸಂದರ್ಭದಲ್ಲಿ ನೆರವು