ಕೊಚ್ಚಿ: ಕೇರಳದ ತ್ರಿಶ್ಶೂರ್ ನಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಲಯಾಳಂ ಸ್ಟಾರ್ ನಟ ಸುರೇಶ್ ಗೋಪಿ ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಕೇರಳದಲ್ಲಿ ಇಂದು ಮತದಾನ ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ಸುರೇಶ್ ಗೋಪಿ ಚುನಾವಣಾ ಕಣಕ್ಕಿಳಿದಿದ್ದಾರೆ. ಪ್ರಧಾನಿ ಮೋದಿಯಿಂದ ಪ್ರಭಾವಿತರಾಗಿ ಅವರು ರಾಜಕೀಯಕ್ಕೆ ಬಂದಿದ್ದರು.ಇದೀಗ ಸೂಪರ್ ಸ್ಟಾರ್ ಮೋಹನ್ ಲಾಲ್ ರನ್ನು ಭೇಟಿಯಾಗಿರುವ ಸುರೇಶ್ ಗೋಪಿ ನಾವಿಬ್ಬರೂ ಹಲವು ವರ್ಷಗಳಿಂದಲೂ ಸ್ನೇಹಿತರು.