ವ್ಯಕ್ತಿಯ ಅಂದ ಚೆಂದದ ಬಗ್ಗೆ ಮಾತನಾಡುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿಗೆ ಗಮನ ಕೊಡಿ- ಸಿಎಂಗೆ ರಾಜು ಕಾಗೆ ಟಾಂಗ್

ಬೆಳಗಾವಿ, ಬುಧವಾರ, 17 ಏಪ್ರಿಲ್ 2019 (09:34 IST)

ಬೆಳಗಾವಿ : ಪ್ರಧಾನಿ ಮೋದಿಯ ಅಂದ ಚೆಂದದ ಬಗ್ಗೆ ಮಾತನಾಡಿದ ಸಿಎಂ ಕುಮಾರಸ್ವಾಮಿಗೆ ರಾಜ್ಯದ ಅಭಿವೃದ್ಧಿಗೆ ಗಮನ ಕೊಡಿ ಎಂದು ಬಿಜೆಪಿ ಮಾಜಿ ಶಾಸಕ ರಾಜು ಕಾಗೆ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ದಿನಕ್ಕೆ 10 ಬಾರಿ ಮೇಕಪ್ ಮಾಡಿಕೊಂಡು ಕ್ಯಾಮೆರಾ ಮುಂದೆ ಬರುತ್ತಾರೆ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆ  ನೀಡಿದ್ದರು. ಈ ಬಗ್ಗೆ ಅಥಣಿ ತಾಲೂಕಿನ ಕಾಗವಾಡದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ರಾಜು ಕಾಗೆ ಅವರು ಕುಮಾರಸ್ವಾಮಿ ನಿನ್ನ ನೂರು ಬಾರಿ ಮೈ ತೊಳೆದರೂ ನೀನು ಎಮ್ಮೆ ರೀತಿ ಇರುತ್ತೀಯಾ ಎಂದು ವ್ಯಂಗ್ಯವಾಡಿದ್ದಾರೆ.

 

ಪ್ರಧಾನಿ ನರೇಂದ್ರ ಮೋದಿ ಸುಂದರ, ಚಂದ ಮತ್ತು ಬೆಳ್ಳಗಿದ್ದಾರೆ. ವ್ಯಕ್ತಿಯ ಅಂದ ಚಂದದ ಬಗ್ಗೆ ಸುಮ್ಮನೆ ಯಾಕೆ ಮಾತನಾಡುತ್ತೀರಾ? ಈ ರಾಜ್ಯದ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ರಾಜ್ಯದ ಅಭಿವೃದ್ಧಿಗೆ ಗಮನ ಕೊಡಬೇಕು ಎಂದು ಕಿಡಿಕಾರಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 ಇದರಲ್ಲಿ ಇನ್ನಷ್ಟು ಓದಿ :  

ಲೋಕಸಭಾ ಚುನಾವಣೆ 2019

news

ತೃಣಮೂಲ ಕಾಂಗ್ರೆಸ್ ಪರ ಪ್ರಚಾರ ಮಾಡಿದ ಬಾಂಗ್ಲಾದೇಶ ನಟ! ತಕ್ಷಣವೇ ದೇಶ ಬಿಡಲು ಸೂಚನೆ

ಕೋಲ್ಕೊತ್ತಾ: ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪರ ಲೋಕಸಭಾ ಚುನಾವಣೆ ಪ್ರಚಾರ ರ್ಯಾಲಿಯಲ್ಲಿ ...

news

ಸಿಎಂ ಕುಮಾರಸ್ವಾಮಿಗೆ ಡಿ ಬಾಸ್ ದರ್ಶನ್ ಥ್ಯಾಂಕ್ಸ್ ಹೇಳಿದ್ದೇನು ಗೊತ್ತಾ?!

ಮಂಡ್ಯ: ಸುಮಲತಾ ಅಂಬರೀಶ್ ಪರ ಸ್ವಾಭಿಮಾನ ರ್ಯಾಲಿಯಲ್ಲಿ ಮಾತನಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿಎಂ ...

news

ಧರ್ಮಸ್ಥಳ ದೇವರ ಮೇಲಾಣೆ ನಾನು ಹಾಗೆ ಹೇಳಿದ್ರೆ ಸಿನಿಮಾ ಬಿಡ್ತೀನಿ ಎಂದ್ರು ಯಶ್

ಮಂಡ್ಯ: ಸುಮಲತಾ ಅಂಬರೀಶ್ ಸ್ವಾಭಿಮಾನ ರ್ಯಾಲಿಯಲ್ಲಿ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್ ನಾನು ಜೆಡಿಎಸ್ ...

news

ನಾನೂ ಅಳಬೇಕೆಂದಿದ್ದೇನೆ ಆದ್ರೆ ಕಣ್ಣೀರು ಬರ್ತಿಲ್ಲ ಎಂದ SMK

ಕೆಲವರಿಗೆ ಸಲೀಸಾಗಿ ಕಣ್ಣೀರು ಬರುತ್ತದೆ. ಹಾಗಾಗಿ ಅವರು ಸಿಕ್ಕಾಗ ಒಮ್ಮೆ ಅವರನ್ನೇ ಕೇಳಿ ಕಣ್ಣೀರಿನ ರಹಸ್ಯ ...