ಬಿಜೆಪಿ ಅಭ್ಯರ್ಥಿ ಪರವಾಗಿ ಎಸ್.ಆರ್.ವಿಶ್ವನಾಥ್ ಬ್ಯಾಟ್ ಬೀಸಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಗ್ರಾಮದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆ ನಡೆಯಿತು.ಚುನಾವಣಾ ಕಾರ್ಯಕರ್ತರ ಸಭೆಗೆ ಯಲಹಂಕ ಶಾಸಕ ವಿಶ್ವನಾಥ್ ಸೇರಿದಂತೆ ಸ್ಥಳೀಯ ಬಿಜೆಪಿ ಪಕ್ಷದ ಮುಖಂಡರು ಸಾಥ್ ನೀಡಿದ್ರು.ದೇಶದ ಸುಭದ್ರತೆಗೆ ಮೋದಿಯನ್ನ ಪ್ರಧಾನಿ ಮಂತ್ರಿ ಮಾಡಲೇ ಬೇಕು. ಈ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಬಚ್ಚೇಗೌಡ ಅವರನ್ನ ಹೆಚ್ಚಿನ ಬಹುಮತದಿಂದ ಆರಿಸಿ