ನವದೆಹಲಿ: 60 ವರ್ಷಗಳಿಂದ ಕಾಂಗ್ರೆಸ್ ನವರು ಪ್ರಾಕ್ಟೀಸ್ ಮ್ಯಾಚ್ ಆಡ್ತಾ ಇದ್ರಾ? ನಾಲ್ಕು ತಲೆಮಾರಿನವರು ದೇಶದ ಜನರೊಂದಿಗೆ ಆಟ ಆಡ್ತಾ ಇದ್ರು.. ಹೀಗಂತ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಟೀಕಾ ಪ್ರಹಾರ ನಡೆಸಿದ್ದಾರೆ.ಶೂಟರ್ ಕೂಡಾ ಆಗಿರುವ ರಾಜ್ಯವರ್ಧನ್ ಸಿಂಗ್ ತಮ್ಮದೇ ಶೈಲಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಮೋದಿ ಸರ್ಕಾರ ಜಾರಿಗೊಳಿಸಿದ ಕೆಲವು ರೈತಪರ ಯೋಜನೆಗಳಿಗೆ ತಡೆ ನೀಡುವ ಮೂಲಕ ರೈತರಿಗೆ ಅನ್ಯಾಯವೆಸಗುತ್ತಿದೆ