ಅಣ್ಣ ತಂಗಿಯರ ಭಾವ ಸಂಬಂಧದ ನಾಗಪಂಚಮಿ

ಬೆಂಗಳೂರು, ಬುಧವಾರ, 6 ಆಗಸ್ಟ್ 2008 (18:21 IST)

NRB
ನಾಗರ ಪಂಚಮಿ ಮತ್ತೆ ಬಂದಿದೆ. ಶ್ರಾವಣದ ಹಬ್ಬಗಳ ಸಾಲಿಗೆ ಮುನ್ನುಡಿ. ಸಾಲು ಹಬ್ಬಗಳ ಪೈಕಿ ಮೊದಲನೆಯದು ನಾಗಪಂಚಮಿ. ಬುಧವಾರ ನಾಡಿನಾದ್ಯಂತ ಸಂಭ್ರಮ ಸಂತೋಷದಿಂದ ಮನೆಯವರೆಲ್ಲಾ ಜೊತೆಗೂಡಿ ನಾಗರ ಪಂಚಮಿ ಆಚರಿಸಿದರು.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಬೆಳಿಗ್ಗಿನಿಂದಲೇ ಮನೆಯವರೆಲ್ಲಾ ಸೇರಿ ನಾಗನ ಹುತ್ತಕ್ಕೆ ಹಾಲು ಎರೆಯುವ ಮೂಲಕ ಪೂಜೆ ಮಾಡುತ್ತಿರುವ ದೃಶ್ಯ ಎಲ್ಲೆಡೆ ಕಂಡು ಬಂದಿತ್ತು.

ನಾಗರ ಪಂಚಮಿ ಎರಡು ಆಚರಣೆಗಳಲ್ಲಿ ಒಂದು ನಾಗರಪೂಜೆ ಇನ್ನೊಂದು ಸಹೋದರ ಸಹೋದರಿಯರ ಭಾವ ಸಂಬಂಧಗಳು ಮುಖ್ಯವಾದವು. ಸಹೋದರಿಯರು ಸಹೋದರರ ಬೆನ್ನಿಗೆ ಹಾಲು, ನೀರು ಎರೆಯುವ ಮೂಲಕ ತವರು ತಂಪಾಗಿರಲಿ ಎಂದು ಹಾರೈಸಿದರೆ, ಸಹೋದರರು ಪ್ರೀತಿಯ ಅಕ್ಕ ತಂಗಿಯರಿಗೆ ಉಡುಗೊರೆ ಕೊಟ್ಟು ಸಂಭ್ರಮಿಸುತ್ತಾರೆ.

NRB
ಉತ್ತರ ಭಾರತದಲ್ಲಿ ರಕ್ಷಾ ಬಂಧನ ವೇದಿಕೆಯಾದರೆ, ದಕ್ಷಿಣ ಭಾರತದಲ್ಲಿ ನಾಗರ ಪಂಚಮಿ. ಅಲ್ಲದೆ, ಮಗಳು ಬಂದ ಸಂಭ್ರಮದಲ್ಲಿ ತವರು ಮನೆಯಲ್ಲಿ ಹಬ್ಬದ ರಂಗೇರುತ್ತದೆ.

ಭಾರತೀಯ ಪರಂಪರೆಯಲ್ಲಿ ನಾಗರ ಹಾವನ್ನು ದೈವಸ್ವರೂಪವೆಂದು ನಂಬಲಾಗುತ್ತಿದೆ. ಅಂತೆಯೇ ನಾಗರವು ಆದಿಶೇಷನ ಅವತಾರ ಎಂದು ಪುರಾಣ ತಿಳಿಸುತ್ತದೆ. ಆದರೆ ಹಾವಿನ ಹುತ್ತಕ್ಕೆ ಹಾಲೆರೆಯುವುದರಿಂದ ಹಾವು ಸಂತತಿ ನಾಶಗೊಳ್ಳುತ್ತದೆ ಎಂಬುದು ಹಾವು ತಜ್ಞರ ಅಭಿಪ್ರಾಯ.

ಅರಶಿಣ, ಕುಂಕುಮಗಳ ವಾಸನೆಯಿಂದ ಹಾವುಗಳು ಸಾವನ್ನಪ್ಪುತ್ತದೆ ಎಂಬುದು ಅವರ ಅಂಬೋಣ. ಅಂತೂ ನಾಗರ ಪಂಚಮಿ ಇಂದು ಎಲ್ಲ ಕಡೆ ಸಡಗರದಿಂದ ಆಚರಿಸುತ್ತಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಉತ್ಸವಗಳು

ಬಿಲ್ವಪ್ರಿಯ ಪರಶಿವನಿಗೆ ಜಾಗರಣೆ ಪೂಜೆ - ಶಿವರಾತ್ರಿ

ಮಹಾಶಿವರಾತ್ರಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು. ಈ ಹಬ್ಬವನ್ನು ಮಾಘ ಮಾಸದ ಬಹುಳ ಚತುರ್ದಶಿಯಂದು ...

ಮಹಿಳೆಯರಿಂದ ಅಟ್ಟುಕಲ್ ದೇವಿಯ ದರ್ಶನ

ಅಟ್ಟುಕಲ್ ಭಗವತಿ ಮಂದಿರದಲ್ಲಿ ಕಳೆದ ಹತ್ತು ದಿನಗಳ ಕಾಲ ನಿರಂತರವಾಗಿ ನಡೆದ ಹಬ್ಬದಲ್ಲಿ ಲಕ್ಷಾಂತರ ...

ಭೂಮಿಯ ಸಮೃದ್ಧಿಯ ಸಂಕೇತ ಸಂಕ್ರಾಂತಿ

ಸಂಕ್ರಾಂತಿ ಹಬ್ಬವನ್ನು ಕೃಷಿ ಪ್ರಧಾನ ಹಬ್ಬವಾಗಿ ದಕ್ಷಿಣ ಭಾರತದಲ್ಲಿ ವಿಶೇಷವಾಗಿ ವಿಶಿಷ್ಟ ರೀತಿಯಲ್ಲಿ ...

ದೀಪಾರಾಧನೆಯ ಕಾರ್ತಿಕ ದೀಪೋತ್ಸವ

ಬೆಳಕಿನ ಹಬ್ಬವಾದ ಕಾರ್ತಿಕ ದೀಪೋತ್ಸವವು ವೃಶ್ಚಿಕ ಮಾಸದ ಕೃತಿಕಾ ನಕ್ಷತ್ರದ ಹುಣ್ಣಿಮೆಯ ದಿನದಂದು ...