ಭಕ್ತಾಧಿಗಳೇ ಬನ್ನಿ...ಕೊಟ್ಟೂರ ಜಾತ್ರೆಗೆ ಹೋಗಾಣು

ಬುಧವಾರ, 15 ಫೆಬ್ರವರಿ 2012 (20:15 IST)

WD
ಕೊಟ್ಟೂರ ಸ್ವಾಮಿ. ಎಂ.ಎಸ್.

"ಕೊಟ್ಟೂರ ದೊರೆಯೇ, ನಿನಗಾರು ಸರಿಯೇ, ಸರಿಯೆಂದವರ ಹಲ್ಲು ಮುರಿಯೇ, ಬೋಪರಾಕ್" ಎನ್ನುವ ಭಕ್ತರ ಕೂಗು ಮುಗಿಲು ಮುಟ್ಟುತ್ತಿದೆ. ಫೆಬ್ರವರಿ 17 ರಂದು ಕೊಟ್ಟೂರು ಶ್ರೀ ಗುರುಬಸವೇಶ್ವರ ಸ್ವಾಮಿಯ ನಡೆಯಲಿದೆ. ಗಣಿಧಣಿಗಳ ನಾಡೆಂದು ಕರೆಯುವ ಬಳ್ಳಾರಿಯ ಜಿಲ್ಲೆಯ ಕೊಟ್ಟೂರು ಪ್ರಮುಖ ಧಾರ್ಮಿಕ ಕ್ಷೇತ್ರ. ಹನ್ನೆರಡನೇ ಶತಮಾನದ ಬಸವಕ್ರಾಂತಿಯ ನಂತರದಲ್ಲಿ ಅಸಮಾನತೆ, ಜಾತಿ ವರ್ಗ ವ್ಯವಸ್ಧೆಯ ವಿರುದ್ಧ ಬಂಡೆದ್ದು ತನ್ನದೇ ಪರಂಪರೆಯನ್ನು ಕಟ್ಟಿ ಬೆಳೆಸಿದ ಕೊಟ್ಟೂರು ಗುರು ಬಸವೇಶ್ವರರು ಪ್ರಮುಖ ಸಂತ ಶರಣರು.

ಜೀವನದುದ್ದಕ್ಕೂ ಮರುಳನಂತೆ (ಹುಚ್ಚನಂತೆ) ವರ್ತಿಸುತ್ತಾ ತನ್ನ ಸಾಧನೆ, ಸಮಾನತೆ, ಕಾಯಕ ಪ್ರೇಮದಿಂದಲೇ ಲೋಕದ ಜನರ ಪ್ರೀತಿಗಳಿಸಿದ ಕೊಟ್ಟೂರು ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರವೆಂದರೆ ತಪ್ಪಾಗದು. ಮಾನವತೆಗೆ ಹೊಸ ಮೆರುಗನಿತ್ತ ಕೊಟ್ಟೂರೇಶ್ವರರು ತಮಿಳುನಾಡು ಮೂಲದ ಧರ್ಮಪುರಿ ಜಿಲ್ಲೆಯ ಹೊಸೂರಿನವರೆಂದು ಪುರಾಣದಲ್ಲಿನ ಇತಿಹಾಸ ತಿಳಿಸುತ್ತದೆ. ಅಲ್ಲಿಂದ ಪಯಣಿಸಿದ ಕೊಟ್ಟೂರೇಶ್ವರರು ಯೆಡೆಯೂರಿನ ಯತಿಗಳ ಶಿಷ್ಯತ್ವ ಪಡೆದು ನಂತರ ಚಾಮರಾಜನಗರ, ಹಂಪಿ ಮಾರ್ಗವಾಗಿ ಕೊಟ್ಟೂರಿಗೆ ಬಂದು ನೆಲೆಸಿದರೆಂದು ಹಿರಿಯರು ಹೇಳುತ್ತಾರೆ.

ಬಸವಧರ್ಮದ ಷಟ್‌ಸ್ಥಳ ಮತ್ತು ಅಷ್ಟಾವರಣಗಳನ್ನು ಸತತ ಸಾಧನೆ ಮಾಡಿದ ಗುರುಬಸವೇಶ್ವರರು ತಮ್ಮ ಪವಾಡಗಳಿಂದಾಗಿ, ಸಮಾನತಾವಾದದಿಂದಾಗಿ ಧರ್ಮಾತೀತವಾಗಿ ಜನರನ್ನು ಆಕರ್ಶಿಸುತ್ತಾ ಸಾಗಿದ ಕತೆಯನ್ನು ಎಲ್ಲರೂ ಕೇಳಬಹುದಾಗಿದೆ.

ಕೊಟ್ಟೂರೇಶನ ಭಕ್ತನಾಗಿದ್ದ ದೆಹಲಿಯ ಸುಲ್ತಾನ ಅಕ್ಬರ್ ಬಾದಶಹ ಕೊಟ್ಟೂರಿಗೆ ಭೇಟಿ ನೀಡಿದ ಸಮಯದಲ್ಲಿ ತನ್ನ ಕೊಡುಗೆಯಾಗಿ ನೀಡಿದ ಮಣಿಮಂಚ ಮತ್ತು ಖಡ್ಗವನ್ನು ಈಗಲೂ ನೋಡಬಹುದಾಗಿದೆ. ಲೀಲಾ ವಿನೋದಿಯಾಗಿದ್ದ ಕೊಟ್ಟೂರೇಶ್ವರ ತೊಟ್ಟಿಲ ಮಠ, ಮೂರ್ಕಲ್ ಮಠ, ಹಿರೇ ದರ್ಬಾರ್ ಮಠ,ಗಚ್ಚಿನ ಮಠ ಹಾಗೂ ಮರಿಕೊಟ್ಟೂರೇಶ್ವರನ ಮಠಗಳನ್ನು ತನ್ನ ಸ್ಥಾನಗಳನ್ನಾಗಿ ಮಾಡಿಕೊಂಡಿದ್ದನೆಂದು ಪೂರ್ವಿಕರು ಹೇಳುತ್ತಾರೆ.ಇದರಲ್ಲಿ ಇನ್ನಷ್ಟು ಓದಿ :  

ಉತ್ಸವಗಳು

ಶ್ರೀ ಕ್ಷೇತ್ರ ಸುತ್ತೂರಿನ ವಿಶಿಷ್ಟ ಜಾತ್ರೆಗೆ ನೀವೂ ಬನ್ನಿ

ಇತರೆಡೆಗಳಲ್ಲಿ ಆಚರಿಸುವ ಜಾತ್ರೆಗೆ ಹೋಲಿಸಿದರೆ ಮೈಸೂರಿನ ನಂಜನಗೂಡು ತಾಲೂಕು ಸುತ್ತೂರು ಶ್ರೀ ಕ್ಷೇತ್ರದ ...

ಅಷ್ಟಮಿ ವಿಶೇಷ: ಕೃಷ್ಣಂ ವಂದೇ ಜಗದ್ಗುರುಂ...

ವೇದಗಳನ್ನು ಉದ್ಧರಿಸಿದ (ಮತ್ಸ್ಯಾವತಾರಿ), ಜಗತ್ತನ್ನು ಹೊತ್ತ (ಕೂರ್ಮಾವತಾರಿ), ಭೂಮಿಯನ್ನು ರಕ್ಷಿಸಿದ ...

ಮಾಹೇಶ್ವರದಲ್ಲಿ ಮಹಾಮೃತ್ಯುಂಜಯ ರಥ ಯಾತ್ರೆ

ಮಾಹೇಶ್ವರ (ಮ.ಪ್ರ.): ಐತಿಹಾಸಿಕವಾದ ಮಹಾಬಲೇಶ್ವರದಲ್ಲಿ ಭಾನುವಾರ (ಜ.9) ಖ್ಯಾತ ಮಹಾಮೃತ್ಯುಂಜಯ ರಥ ಯಾತ್ರೆ ...

ಬಾಬಾ ಜನ್ಮದಿನ: ಸತ್ಯ ಸಾಯಿ ವಿದ್ಯಾ ವಾಹಿನಿ ಯೋಜನೆ ಜಾರಿ

ಪುಟ್ಟಪರ್ತಿ: ಶ್ರೀ ,ಸತ್ಯ ಸಾಯಿಬಾಬಾ 85ನೇ ಜನ್ಮದಿನಾಚರಣೆ ಅಂಗವಾಗಿ ನವೆಂಬರ್ 15ರಿಂದ ನವೆಂಬರ್ ...