Widgets Magazine

ಭಕ್ತಾಧಿಗಳೇ ಬನ್ನಿ...ಕೊಟ್ಟೂರ ಜಾತ್ರೆಗೆ ಹೋಗಾಣು

WD
ಮೂರ್ಕಲ್ ಮಠ ಊಟದ ಮನೆಯಾಗಿತ್ತು, ತೊಟ್ಟಿಲು ಮಠ ತನ್ನ ಬಾಲ್ಯದ ಸ್ಥಳವಾಗಿತ್ತು ಅಂತೆಯೇ ಜೀವನವನ್ನು ದರ್ಬಾರ್ ಮಠದಲ್ಲಿ ಕಳೆದ ಕೊಟ್ಟೂರೇಶ್ವರರು ತಮ್ಮ ಸಾಧನೆಯ ಅಂತಿಮ ಹಂತಕ್ಕಾಗಿ ಗಚ್ಚಿನ ಮಠವನ್ನು ಆಯ್ಕೆ ಮಾಡಿಕೊಂಡರೆಂದು ಹೇಳುವರು. ಗಚ್ಚಿನ ಮಠದಲ್ಲಿ ಜೀವಂತ ಸಮಾಧಿ ಸ್ಥಿತಿಗೆ ತಲುಪಿದರೆಂದು ಇತಿಹಾಸ ತಿಳಿಸುತ್ತದೆ.

ಎಲ್ಲರೂ ಸಾಮಾನ್ಯವಾಗಿ ಭಯಬೀಳುವಂತಹ ಮೂಲಾ ನಕ್ಷತ್ರದಲ್ಲಿ ಜನಿಸಿದ ಶರಣರ ಸಹ ಮಧ್ಯ ಕರ್ನಾಟಕದ ಪ್ರಮುಖ ಜಾತ್ರೆಯಾಗಿದೆ. ತನ್ನ ಸಮಾನತೆಯ ಪ್ರತಿಬಿಂಬವಾಗಿ ದಲಿತರ ಕೇರಿಯ ಮುತ್ತೈದೆ ಮಹಿಳೆಯಿಂದ ಗಿಣ್ಣದ ಪ್ರಸಾದ ಮತ್ತು ಆರತಿಯೆತ್ತಿದ ನಂತರವೇ ರಥವನ್ನೆಳೆಯುವ ಕಾರ್ಯ ಆರಂಭವಾಗುವುದು ವಿಶೇಷದ್ದಾಗಿದೆ. ಅದರಲ್ಲೂ ಸರಿಸುಮಾರು ಕಳೆದ 500 ವರ್ಷಗಳಿಂದ ದಲಿತರ ಕೇರಿಯಲ್ಲಿ ಹಸು ಇಲ್ಲವೇ ಎಮ್ಮೆಯೊಂದು ಕೊಟ್ಟೂರ ತೇರಿನ ಹಿಂದಿನ ದಿನಗಳಂದು ಕರು ಹಾಕುತ್ತಿರುವುದು ನಿಜಕ್ಕೂ ಪಾವಡವಾಗಿದೆ.

ನಾಗೇಂದ್ರ ತ್ರಾಸಿ| Last Modified ಬುಧವಾರ, 15 ಫೆಬ್ರವರಿ 2012 (20:15 IST)
ಜಾತ್ರೆ ಸಮಯದಲ್ಲಿ ರಾಜ್ಯದ ಹಲವು ಕಡೆಗಳಿಂದ ಭಕ್ತರು ತಂಡೋಪ ತಂಡವಾಗಿ ಪಾದಯಾತ್ರೆಯಲ್ಲಿ ಕೊಟ್ಟೂರಿಗೆ ಆಗಮಿಸುತ್ತಿರುವ ದೃಷ್ಯ ನಿಜಕ್ಕೂ ಸ್ಮರಣೀಯ. ಪಾದಯಾತ್ರಿಗಳ ಸಹಾಯ-ಸೇವೆಗೆಂದು ಕೊಟ್ಟೂರಿನ ನಾಗರೀಕರು ಟೊಂಕಕಟ್ಟಿ ನಿಂತಿರುವರು. ದಾರಿಯುದ್ದಕ್ಕೂ ಪಾದಯಾತ್ರಿಗಳನ್ನು ಸತ್ಕರಿಸುತ್ತಾ, ಅವರಿಗೆ ಊಟ, ಉಪಹಾರ, ವೈದ್ಯಕೀಯ ಸಹಾಯವನ್ನು ಸೇವೆಯ ರೂಪದಲ್ಲಿ ನೀಡುತ್ತಿರುವುದನ್ನು ಎಲ್ಲರೂ ಮೆಚ್ಚಬೇಕಾಗಿದೆ.


ಇದರಲ್ಲಿ ಇನ್ನಷ್ಟು ಓದಿ :