Widgets Magazine

ಭಕ್ತಾಧಿಗಳೇ ಬನ್ನಿ...ಕೊಟ್ಟೂರ ಜಾತ್ರೆಗೆ ಹೋಗಾಣು

WD
ಜಾತ್ರೆಯು ಸರಿಸುಮಾರು ಎಂಟರಿಂದ ಹತ್ತು ದಿನಗಳ ತನಕ ನಡೆಯುತ್ತದೆ, ಹತ್ತಾರು ಕಡೆಗಳ ಜನರು ಜಾತ್ರೆಗೆ, ಕೊಟ್ಟೂರೇಶನ ದರ್ಶನಕ್ಕೆ ಆಗಮಿಸುತ್ತಿರುವುದು ವರ್ಷ ವರ್ಷಕ್ಕೂ ಹೆಚ್ಚಾಗುತ್ತಿದೆ. ಬಳ್ಳಾರಿ ಜಿಲ್ಲೆಯ ಪ್ರಮುಖ ವಾಣಿಜ್ಯ ಹಾಗು ಶೈಕ್ಷಣಿಕ ಕೇಂದ್ರವಾಗಿರುವ ಕೊಟ್ಟೂರು ಸರಕಾರದ ನಿರ್ಲಕ್ಷ್ಯಕ್ಕೆ ತುತ್ತಾಗಿರುವುದು ಸುಳ್ಳಲ್ಲ. ಒಂದು ನೂರು ವರ್ಷ ಇತಿಹಾಸವಿದ್ದ ಹೊಸಪೇಟೆ-ಕೊಟ್ಟೂರು ರೈಲು ಮಾರ್ಗವನ್ನು ಉನ್ನತೀಕರಿಸುವ ನೆಪದಲ್ಲಿ ಮತ್ತು ಇಲ್ಲಿನ ನಾಗರೀಕರ ಬಹುದಿನದ ಬೇಡಿಕೆಯಾಗಿದ್ದ ಹೊಸಪೇಟೆ-ಕೊಟ್ಟೂರು-ರೈಲು ಮಾರ್ಗ ನಿರ್ಮಾಣ ಸಂಪೂರ್ಣವಾಗಿದ್ದರೂ ಪ್ರಯಾಣಿಕರಿಗೆ ರೈಲು ಮಾತ್ರ ಮರೀಚಿಕೆಯಾಗಿದೆ.

ನಾಗೇಂದ್ರ ತ್ರಾಸಿ| Last Modified ಬುಧವಾರ, 15 ಫೆಬ್ರವರಿ 2012 (20:15 IST)
ಬಳ್ಳಾರಿ ಜಿಲ್ಲೆಯಲ್ಲಿನ ಬಳ್ಳಾರಿ ಮತ್ತು ಹೊಸಪೇಟೆಗಳನ್ನು ಹೊರತು ಪಡಿಸಿದರೆ ಅತ್ಯುತ್ತಮ ಶಿಕ್ಷಣಕ್ಕೆಂದು ಹೆಸರಾಗಿರುವ ಕೊಟ್ಟೂರಿನಲ್ಲಿ ಹತ್ತಾರು ಶಾಲಾ ಕಾಲೇಜುಗಳು ತಲೆಯೆತ್ತಿವೆ. ಆದರೆ ಕೇವಲ ಹೋಬಳಿ ಕೇಂದ್ರವಾಗಿರುವ ಕೊಟ್ಟೂರನ್ನು ತಾಲೂಕು ಕೇಂದ್ರವಾಗಿಸುವಂತೆ ರಾಜ್ಯ ಸರಕಾರವನ್ನು ಬಹು ಹಿಂದಿನಿಂದ ಕೇಳುತ್ತಿದ್ದರೂ ರಾಜ್ಯ ಸರಕಾರ ನಿರ್ಲಕ್ಷಿಸಿದೆ. ಇನ್ನಾದರೂ ಸೌಲಭ್ಯವಂಚಿತ ಶ್ರೀಕ್ಷೇತ್ರವನ್ನು ಅಭಿವೃದ್ಧಿಪಡಿಸುವತ್ತ ರಾಜ್ಯ ಸರಕಾರ ಕ್ರಮಕೈಗೊಳ್ಳಬೇಕೆಂಬುದು ನಮ್ಮೆಲ್ಲರ ಬಯಕೆ...


ಇದರಲ್ಲಿ ಇನ್ನಷ್ಟು ಓದಿ :