Widgets Magazine

ಮಹಾ ಶಿವರಾತ್ರಿ ಮಹಾನ್ ಯಕ್ಷ ಕಲಾವಿದರು...

ನಾಗೇಂದ್ರ ತ್ರಾಸಿ| Last Modified ಭಾನುವಾರ, 19 ಫೆಬ್ರವರಿ 2012 (12:21 IST)
ಅಲರ್‌ಮೇಲ್ ವಲ್ಲಿ: ಪಂದನಲ್ಲೂರ್ ಶೈಲಿಯ ಭರತನಾಟ್ಯದ ಅನುಪಮ ನೃತ್ಯ ಕಲಾವಿದೆಯಾದ ಅಲರ್‌ಮೇಲ್ ವಲ್ಲಿ ತಮ್ಮ ವಿಶಿಷ್ಟ ನೃತ್ಯ ಶೈಲಿ ಹಾಗೂ ನಾಟ್ಯ ಸಂಯೋಜನೆಗೆ ಹೆಸರುವಾಸಿಯಾದವರು. 1991ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಕಲಾವಿದೆ. 2001ರಲ್ಲಿ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಪಡೆದ ಇವರಿಗೆ, 2004 ರಲ್ಲಿ ಪದ್ಮ ಭೂಷಣ ಪ್ರಶಸ್ತಿಯನ್ನಿತ್ತು ಭಾರತ ಸರಕಾರ ಸನ್ಮಾನಿಸಿತ್ತು.
ಚನ್ನುಲಾಲ್ ಮಿಶ್ರ: ಇವರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಕಿರಾನ ಘರಾನದ ಪ್ರಖ್ಯಾತ ಗಾಯಕರು. ಪದ್ಮಭೂಷಣರಾದ ಚನ್ನುಲಾಲರಿಗೆ ಉತ್ತರಪ್ರದೇಶ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ನೌಷಾದ್ ಪ್ರಶಸ್ತಿಯನ್ನಿತ್ತು ಉತ್ತರಪ್ರದೇಶ ಸರಕಾರ ಗೌರವಿಸಿದೆ.


ಇದರಲ್ಲಿ ಇನ್ನಷ್ಟು ಓದಿ :