ಮಹಿಳೆಯರಿಂದ ಅಟ್ಟುಕಲ್ ದೇವಿಯ ದರ್ಶನ

ತಿರುವನಂತಪುರಂ, ಶುಕ್ರವಾರ, 22 ಫೆಬ್ರವರಿ 2008 (15:35 IST)

ಅಟ್ಟುಕಲ್ ಭಗವತಿ ಮಂದಿರದಲ್ಲಿ ಕಳೆದ ಹತ್ತು ದಿನಗಳ ಕಾಲ ನಿರಂತರವಾಗಿ ನಡೆದ ಹಬ್ಬದಲ್ಲಿ ಸಂಖ್ಯೆಯಲ್ಲಿದ್ದ ಮಹಿಳಾ ಭಕ್ತರು ಅಟ್ಟುಕಲ್ ದೇವಿಗೆ ಪ್ರಾರ್ಥನೆ ಸಲ್ಲಿಸಿದರು.

ಪೊಂಗಲಾ ಆರಂಭಕ್ಕೆ ಮುಂಚೆ ಮಂದಿರದಲ್ಲಿ ಅರ್ಚಕರು ದೇವಿಯ ಭಕ್ತಿ ಗೀತೆಗಳನ್ನು ಹಾಡುವದರೊಂದಿಗೆ ಪಂಡರಾ- ಅಡಪ್ಪು ಪೂಜೆಯನ್ನು ಆರಂಭಿಸಿದರು. ನಂತರ ನಗರಾದ್ಯಂತ ಮೆರವಣಿಗೆ ನಡೆಸಿದ ಭಕ್ತರು ದೇವಿಗೆ ಪ್ರಾರ್ಥನೆಯನ್ನು ಸಲ್ಲಿಸಿದರು.

ದೇಶದ ಇತರ ರಾಜ್ಯಗಳಿಂದ, ಜಿಲ್ಲೆಗಳಿಂದ, ಗ್ರಾಮೀಣ ಭಾಗಗಳಿಂದ ಬೆಳಗಿನ ಜಾವಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಮಂದಿರಕ್ಕೆ ಆಗಮಿಸಿ ದೇವಿಯ ಪಡೆದು ಪುನೀತರಾದರು.ದೇವಾಲಯದ ಐದು ಕಿ.ಮಿ ಸುತ್ತಲಿನ ಪ್ರದೇಶ ಭಕ್ತರಿಂದ ತುಂಬಿ ತುಳಕುತ್ತಿತ್ತು.

ವಿದೇಶಿಯರು ದೇಶದ ಪ್ರಮುಖ ಚಿತ್ರನಟಿಯರು, ರಾಜಕಾರಣಿಗಳು ಹಾಗು ಅಧಿಕಾರಿಗಳು ಕಂಪೆನಿಗಳ ಮುಖ್ಯಸ್ಥರು ಅಟ್ಟುಕಲ್ ದೇವಿಯ ದರ್ಶನ ಪಡೆಯುತ್ತಿದ್ದು, ಹೆಚ್ಚಿನ ಮಹಿಳೆಯರು ಒಂದೇಡೆಸೇರುವ ಸ್ಥಳವೆಂದು ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದಿದೆ.ಇದರಲ್ಲಿ ಇನ್ನಷ್ಟು ಓದಿ :  

ಉತ್ಸವಗಳು

ಭೂಮಿಯ ಸಮೃದ್ಧಿಯ ಸಂಕೇತ ಸಂಕ್ರಾಂತಿ

ಸಂಕ್ರಾಂತಿ ಹಬ್ಬವನ್ನು ಕೃಷಿ ಪ್ರಧಾನ ಹಬ್ಬವಾಗಿ ದಕ್ಷಿಣ ಭಾರತದಲ್ಲಿ ವಿಶೇಷವಾಗಿ ವಿಶಿಷ್ಟ ರೀತಿಯಲ್ಲಿ ...

ದೀಪಾರಾಧನೆಯ ಕಾರ್ತಿಕ ದೀಪೋತ್ಸವ

ಬೆಳಕಿನ ಹಬ್ಬವಾದ ಕಾರ್ತಿಕ ದೀಪೋತ್ಸವವು ವೃಶ್ಚಿಕ ಮಾಸದ ಕೃತಿಕಾ ನಕ್ಷತ್ರದ ಹುಣ್ಣಿಮೆಯ ದಿನದಂದು ...

ಮಥುರೆಯಲ್ಲಿ ಕೃಷ್ಣಾಷ್ಟಮಿ ಸಡಗರ

ಶ್ರೀಕೃಷ್ಣ ಪರಮಾತ್ಮ ಹುಟ್ಟಿ ಬೆಳೆದ ಮಥುರೆಯಲ್ಲಿ ಕೃಷ್ಣಾಷ್ಟಮಿಯ ದಿನದಂದು ಆಚರಣೆಗಳು ...

ತನು-ಮನವರಳಿಸುವ ಜನ್ಮಾಷ್ಟಮಿ ಆಚರಣೆ

ಶ್ರಾವಣದ ಕೃಷ್ಣಪಕ್ಷದ 8ನೇ ದಿನವನ್ನು ಕೃಷ್ಣ ಜನ್ಮಾಷ್ಟಮಿಯಾಗಿ ಆಚರಿಸಲಾಗುತ್ತದೆ. ದ್ವಾಪರಯುಗದಲ್ಲಿ ...