Widgets Magazine

ರಾಜ್ಯಾದ್ಯಂತ ಗೌರಿ - ಗಣೇಶ ಹಬ್ಬದ ಸಂಭ್ರಮ

NRB
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಂಗಳವಾರ ಗೌರಿ ಹಬ್ಬದ ಸಂಭ್ರಮ ಒಂದೆಡೆಯಾದರೆ, ಮತ್ತೊಂದೆಡೆ ಬುಧವಾರ ನಡೆಯಲಿರುವ ಗಣೇಶನ ಹಬ್ಬಕ್ಕೆ ಬೀದಿ-ಬೀದಿಗಳಲ್ಲಿ ಅಲಂಕಾರಗೊಂಡ ಗಣೇಶನ ಮೂರ್ತಿ ಖರೀದಿ ಭರಾಟೆ ನಡೆದಿದೆ.

ಹೆಣ್ಣುಮಕ್ಕಳು ತವರಿನ ನೆನಪಿಗೆ ಆಚರಿಸುವ ಎನ್ನುವುದು ಸಂಪ್ರದಾಯದ ಮಾತು. ಹೆಣ್ಮಕ್ಕಳನ್ನು ತವರಿನತ್ತ ಆಕರ್ಷಿಸುವುದರೊಂದಿಗೆ ತಾಯಿ-ಮಗಳು ಇಬ್ಬರು ಪರಸ್ಪರ ಕಾಣುವ, ಬಾಗಿನ ಕೊಡುವ ತವಕ. ಅಲ್ಲದೆ, ಈ ದಿನ ಕೆಲವರು ಸ್ವರ್ಣಗೌರಿ ವ್ರತ ಕೂಡ ಆಚರಿಸುತ್ತಾರೆ.

ಈ ಆಚರಣೆಯ ಪೌರಾಣಿಕ ಹಿನ್ನೆಲೆಯತ್ತ ಗಮನ ಹರಿಸಿದರೆ ಇದು ಪಾರ್ವತಿಯ ಕಥೆ. ಪರಮೇಶ್ವರನೊಂದಿಗೆ ವಿವಾಹವಾದ ಬಳಿಕ ಪಾರ್ವತಿ ತಂದೆ ಪರ್ವತರಾಜ, ಮಗಳನ್ನು ತವರಿಗೆ ಕರೆದುಕೊಂಡಲು ಬರುತ್ತಾನೆ. ಆದರೆ ಶಿವನಿಗಿದು ಇಷ್ಟವಿಲ್ಲ. ಆದರೂ ಶಂಕರ ಪತ್ನಿಯನ್ನು ಕಳುಹಿಸಲು ಒಪ್ಪುತ್ತಾನ
NRB
.


ಬಹಳ ದಿನಗಳಾದರೂ ಪಾರ್ವತಿ ಬರದಿದ್ದಾಗ, ಮಗ ಗಣೇಶನನ್ನು ಕಳುಹಿಸುತ್ತಾನೆ ಶಿವ. ಅಲ್ಲಿ ತದಿಗೆಯಂದು ತವರಿನಲ್ಲಿ ಗೌರಿಗೆ ಸಿಹಿಯೂಟವಾದರೆ, ತಿಂಡಿಪೋತ ಗಣೇಶನಿಗೂ ಮರುದಿನ ಮೃಷ್ಟಾನ್ನ ಭೋಜನ. ಬಳಿಕ ಪಂಚಮಿಯಂದು ಅಮ್ಮನೊಂದಿಗೆ ವಾಪಸ್ ಹೊರಡುತ್ತಾನೆ ಗಣೇಶ.

ಬೆಂಗಳೂರು| ಇಳಯರಾಜ| Last Modified ಮಂಗಳವಾರ, 2 ಸೆಪ್ಟಂಬರ್ 2008 (13:38 IST)
ಹಬ್ಬ ಹರಿದಿನಗಳನ್ನು ಆಚರಿಸುವುದರಲ್ಲಿ ಬೆಂಗಳೂರಿನ ಜನತೆ ಎತ್ತಿದ ಕೈ. ಬೆಳಗ್ಗಿನಿಂದಲೇ ಎಲ್ಲಾ ಮನೆಗಳಲ್ಲಿ ಗೌರಿ ಮೂರ್ತಿಯನ್ನಿಟ್ಟು ಪೂಜೆ ಮಾಡಿ ಭಕ್ಷ್ಯಗಳನ್ನಿಟ್ಟು ಸಂಭ್ರಮಿ ಸುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತದೆ. ಈ ನಡುವೆ ಹಣದುಬ್ಬರದ ಬಿಸಿ ಗೌರಿ-ಹಬ್ಬಕ್ಕೂ ತಟ್ಟಿದೆ.ಮುದ್ದು ಗೌರಿ ಮೂರ್ತಿಗಳ ಹಿಂದೆ ಸಾಲಾಗಿ ಕುಳಿತ ಗಣಪನ ವಿಗ್ರಹಗಳು ನಗರದ ಬೀದಿ ಬೀದಿಗಳಲ್ಲಿ ರಾರಾಜಿಸುತ್ತಿದೆ.


ಇದರಲ್ಲಿ ಇನ್ನಷ್ಟು ಓದಿ :