ಮನುಷ್ಯನ ಬದುಕಿನಲ್ಲಿ ಕೈಗಳ ಪಾತ್ರ ಮಹತ್ವದ್ದು. ಪ್ರತಿಯೊಂದು ಕೆಲಸದಲ್ಲಿ ಸದಾ ನಮಗೆ ಜೊತೆಗಾರರಾಗಿ ನಮ್ಮೊಂದಿಗಿರುತ್ತವೆ ನಮ್ಮೆರಡು ಕೈಗಳು. ನಮ್ಮ ಜೀವನವನ್ನು ರೂಪಿಸುವ, ಜನರ ಜೊತೆಗೆ ಬಾಂಧವ್ಯ ಬೆಸೆಯಲು ಸಹಾಯ ಮಾಡುವ ಕೈಗಳನ್ನು ನಾವು ಸುಂದರವಾಗಿ ಕಾಣುವಂತೆ ನೋಡಿಕೊಳ್ಳಬೇಕು ಅಲ್ಲವೇ..? ಅದರಲ್ಲೂ, ಸ್ತ್ರೀಯರ ಕೈಗಳ ಸೌಂದರ್ಯ ಹೆಚ್ಚಿದಷ್ಟು ಅವರಿಗೆ ಅಧಿಕ ಸಂತೋಷ.ಪ್ರತೀ ಬಳೆಯು ಒಂದೊಂದು ಕಥೆ ಹೇಳುತ್ತದೆ. ಒಬ್ಬರು ನೀಡಿದ ಉಡುಗೊರೆಯಾಗಿ, ಹಿರಿಯರ ಆಶೀರ್ವಾದವಾಗಿ, ಪತಿಯ ಒಲುಮೆಯಾಗಿ, ಸಹೋದರ ಸಹೋದರಿಯರ