ಬೆಂಗಳೂರು: ಮೊದಲ ಮಿಲನದಲ್ಲಿಯೇ ಗರ್ಭ ಧರಿಸುತ್ತಾರೆಯೇ..? ನವ ಜೋಡಿಯನ್ನು ಮೊತ್ತ ಮೊದಲು ಕಾಡುವ ಪ್ರಶ್ನೆಯಿದು. ಈ ಪ್ರಶ್ನೆಗೆ ಉತ್ತರ ಹೌದು ಅಥವಾ ಇಲ್ಲ ಎರಡೂ ಆಗಿರಬಹುದು. ಮದುವೆಯ ಹೊಸತರಲ್ಲಿ ಗಂಡು, ಹೆಣ್ಣು ಇಬ್ಬರಲ್ಲೂ ಕೌತುಕ, ಆತಂಕ ಸಹಜವಾಗಿಯೇ ಮನೆ ಮಾಡಿರುತ್ತದೆ. ಮೊದಲ ರಾತ್ರಿಯಲ್ಲಿ ಹೇಗಿರಬೇಕು, ಏನೇನು ಮಾಡಬೇಕು ಎನ್ನುವಂತ ಅಳುಕು ಇಬ್ಬರಲ್ಲೂ ಸಹಜ. ಅದರ ನಡುವೆಯೇ ಮೊದಲ ಮಿಲನವಾದಾಗಲೇ ಗರ್ಭಧಾರಣೆ ಆಗುತ್ತದೆಯೇ ಎನ್ನುವುದು ಇಬ್ಬರನ್ನೂ ಕಾಡುತ್ತದೆ. ಮೊದಲ ಮಿಲನದಲ್ಲಿ