ಹೋಳಿ ಎಂದೊಡನೆ ಎಲ್ಲರಿಗೂ ನೆನಪಾಗುವುದೇ ಬಣ್ಣದ ರಂಗು. ಅಂದು ಒಬ್ಬರಿಗೊಬ್ಬರು ಬಣ್ಣ ಎರಚುತ್ತಾ, ನೀರಿನೊಂದಿಗೆ ಮಿಶ್ರಣ ಮಾಡಿ ಹೋಳಿ ಹಾಡುತ್ತಾ ಸಂಭ್ರಮಿಸುತ್ತಾರೆ.ಸೆಲಿಬ್ರೆಟಿಗಳ ಮನೆಗಳಲ್ಲಂತೂ ಇದು ಕೊಂಚ ಹೆಚ್ಚೆಂದೇ ಹೇಳಬಹುದು. ಆದರೆ, ಬಣ್ಣ ಹಾಕುವುದು ಸಂಭ್ರಮಕ್ಕೆ ಅಷ್ಟೇ ಅಲ್ಲ ಅಪಾಯವನ್ನೂ ಉಂಟುಮಾಡುತ್ತದೆ. ಬಣ್ಣದಲ್ಲಿ ಅಡಗಿರುವ ಹಾನಿಕಾರಕ ರಾಸಾಯನಿಕ ಅಂಶಗಳು ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ನಿಮ್ಮ ಚರ್ಮದ ಮೇಲೂ ಒಂದಿಷ್ಟು ಕಾಳಜಿ ಇರಬೇಕು. ಅದಕ್ಕೇನು ಮಾಡಬೇಕು? ಎಂಬುದರ ಬಗ್ಗೆ ಚರ್ಮರೋಗತಜ್ಞರಾದ