ಬೆಂಗಳೂರು : ಕೋವಿಡ್ ಗುಣಮುಖರಾದ ನಂತರ ಅಬ್ಬಾ ಅಂತೂ ಬದುಕಿಕೊಂಡೆ ಅಂತ ನಿಟ್ಟುಸಿರು ಬಿಡುತ್ತಿರುವ ಅನೇಕರು ನಂತರವೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಲೇಬೇಕು. ಅದರಲ್ಲೂ ಹೃದಯದ ಪರೀಕ್ಷೆಯನ್ನಂತೂ ಖಂಡಿತಾ ತಪ್ಪಿಸಬಾರದು ಎನ್ನುತ್ತಾರೆ ವೈದ್ಯರು. ಕೋವಿಡ್ ನಿಂದ ಬಳಲಿ ನಂತರ ಸಂಪೂರ್ಣವಾಗಿ ಗುಣಮುಖರಾದ ಅನೇಕರಲ್ಲಿ ಹೃದಯ ಮತ್ತು ರಕ್ತನಾಳ ಸಂಬಂಧಿ ಸಮಸ್ಯೆಗಳು ಕಂಡುಬಂದಿವೆ. ಅನೇಕ ಪ್ರಕರಣಗಳಲ್ಲಂತೂ ಬಹಳ ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಉದಾಹರಣೆಗಳೂ ಸಾಕಷ್ಟಿವೆ. ಹಾಗಾಗಿ ತಪ್ಪದೇ ಕನಿಷ್ಟ 3