ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಕೆಲವು ಹಣ್ಣು ಹಾಗೂ ತರಕಾರಿಗಳು ಸಹಕಾರಿಯಾಗಿದೆ. ಅದೇ ರೀತಿ ಕೆಲವು ತೈಲಗಳು ಹಾಗೂ ಸುವಾಸನೆಗಳು ಕೂಡ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತವೆ. ರೋಮ್ಯಾನ್ಸ್ ಗೂ ಮುನ್ನ ಬೆಡ್ ರೂಂನಲ್ಲಿ ಸುಗಂಧಿತ ಪರಿಮಳ ಬೀರುವ ಸ್ಪ್ರೇ ಬಳಸಿ. ಗುಲಾಬಿ ತೈಲ ಇಂದ್ರೀಯಗಳಿಗೆ ಆರಾಮ ನೀಡುವುದಲ್ಲದೆ ಈ ತೈಲ ಹಾಕಿದ ನೀರಿನಲ್ಲಿ ಸ್ನಾನ ಮಾಡುವುದರಿಂದ ರೋಮ್ಯಾಂಟಿಕ್ ಮೂಡ್ ಗೆ ಕರೆದೊಯ್ಯುತ್ತದೆ. ಲವಂಗದ ತೈಲ ಒತ್ತಡವನ್ನು ಕಡಿಮೆ ಮಾಡಿ, ಒಳ್ಳೆಯ ಮೂಡ್ ತರಿಸುತ್ತದೆ.