ಆಲ್ಕೋಹಾಲ್ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗಿದ್ದರೂ ಹೆಚ್ಚಿನವರು ಆಲ್ಕೋಹಾಲ್ ಸೇವನೆ ಮಾಡುತ್ತಾರೆ. ಯಾವುದೇ ಪಾರ್ಟಿ ಅಥವಾ ಹಬ್ಬಗಳ ಸಂದರ್ಭದಲ್ಲಿ ಕುಟುಂಬ ಸ್ನೇಹಿತರೊದಿಗೆ ಸೇರಿ ಹೆಚ್ಚಿನ ಜನರು ಮೋಜಿಗಾಗಿ ಮದ್ಯಪಾನ ಮಾಡುತ್ತಾರೆ. ಹಾಗೂ ಹೆಚ್ಚಿನವರಿಗೆ ಮದ್ಯ ಸೇವಿಸುವ ಸಂದರ್ಭದಲ್ಲಿ ಮದ್ಯದ ಜೊತೆಗೆ ಸವಿಯಲು ಏನಾದರೂ ತಿನಿಸು ಇರಲೇಬೇಕು.ಉಪ್ಪಿನಕಾಯಿ, ಕುರುಕುಲು ತಿಂಡಿಗಳು, ಎಣ್ಣೆಯಲ್ಲಿ ಕರಿದ ಆಹಾರಗಳು ಹೀಗೆ ಆಲ್ಕೋಹಾಲ್ ಸೇವಿಸುವಾಗ ಈ ತಿನಿಸುಗಳನ್ನು ಕೂಡಾ ಜೊತೆಗೆ ತಿನ್ನುತ್ತಾರೆ.