ಬಹಳಷ್ಟು ಜನರು ತಮ್ಮ ತ್ವಚೆಯು ತುಂಬಾ ಕಾಂತಿಯುತವಾಗಿ ಕಾಣಲು ಏನು ಕಾರಣ ಎಂದು ಕೇಳಿದರೆ, ಅವರು ತಾವು ಸಾಕಷ್ಟು ನೀರನ್ನು ಕುಡಿಯುತ್ತೇವೆ ಎನ್ನುತ್ತಾರೆ. ಇದರಿಂದಾಗಿಯೇ ನಮ್ಮ ತ್ವಚೆಯಲ್ಲಿ ಇಷ್ಟೊಂದು ಹೊಳಪನ್ನು ಕಾಣಬಹುದು ಎಂದೂ ಹೇಳುವುದನ್ನು ನಾವು ಕೇಳಿರುತ್ತೇವೆ. ಯಾವ ಬಾಲಿವುಡ್ ಸುಂದರ ನಟಿಯರಿಗೆ ಈ ಪ್ರಶ್ನೆ ಕೇಳಿದರೆ ಅವರು ಹೇಳುವುದೂ ಇದೆ. ನಮ್ಮ ತ್ವಚೆಯು ಕಾಂತಿಯುತವಾಗಿರಲು ಸಾಕಷ್ಟು ನೀರು ಕುಡಿಯುತ್ತೇವೆ ಎಂದು ಕಾರಣ ಕೊಡುತ್ತಾರೆ. ನಟಿ ಆಲಿಯಾ ಭಟ್ ಚರ್ಮವು