ಅಸ್ತಮಾ ನಿವಾರಣೆಗೆ ಸುಲಭ ಮನೆ ಮದ್ದುಗಳು..

ಬೆಂಗಳೂರು, ಗುರುವಾರ, 12 ಜುಲೈ 2018 (18:28 IST)

ಉಬ್ಬಸ, ವೇಗವಾದ ಹೃದಯ ಬಡಿತಗಳು, ಗಂಟಲಿನಲ್ಲಿ ಊರಿಯೂತ, ಇತ್ಯಾದಿಗಳು ಅಸ್ತಮಾದ ಸಾಮಾನ್ಯ ಲಕ್ಷಣಗಳಾಗಿವೆ. ಅಸ್ತಮಾ ಸಮಸ್ಯೆಯು ಸುಮಾರಾಗಿ ಬೆಳಿಗ್ಗೆ ಮತ್ತು ರಾತ್ರಿಯ ಸಮಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಈ ಸಮಸ್ಯೆಯಿಂದಾಗಿ ಸುಮಾರು 2.5 ಲಕ್ಷ ಜನರು ಪ್ರತಿವರ್ಷ ಮರಣಹೊಂದುತ್ತಿದ್ದಾರೆ. ಯೋಗ, ಆಯುರ್ವೇದ, ಹೋಮಿಯೋಪತಿ ಇತ್ಯಾದಿ ಪರ್ಯಾಯ ಔಷಧಗಳಿಂದ ಈ ರೋಗವನ್ನು ನಿಯಂತ್ರಿಸಿ ಗುಣಪಡಿಸಿಕೊಳ್ಳಬಹುದಾಗಿದೆ. ಮನೆಯಲ್ಲಿ ನಾವು ಪ್ರತಿದಿನ ಬಳಸುವ ಎಷ್ಟೋ ಪದಾರ್ಥಗಳನ್ನೇ ಆಯುರ್ವೇದದ ಔಷಧಗಳಲ್ಲಿ ಬಳಸುತ್ತಾರೆ. ಹಾಗಾಗಿ ಮನೆಯಲ್ಲಿ ನಾವು ದಿನನಿತ್ಯ ಬಳಸುವ ಪದಾರ್ಥಗಳಿಂದ ಅಸ್ತಮಾ ಸಮಸ್ಯೆಯನ್ನು ಹೇಗೆ ಗುಣಪಡಿಸಬಹುದು ಎಂಬುದನ್ನು ನೋಡೋಣ.
 
*ದಾಲ್ಚಿನಿ ಮತ್ತು ಜೇನು - ಒಂದು ಕಪ್ ಕುದಿಯುವ ನೀರಿಗೆ ಒಂದು ಚಮಚ ದಾಲ್ಚಿನಿ ಹಾಕಿ 15 ನಿಮಿಷ ಕುದಿಸಿ ಮತ್ತು ಅದಕ್ಕೆ 1-2 ಚಮಚ ಜೇನುತುಪ್ಪವನ್ನು ಬೆರೆಸಿ ಕುಡಿಯಿರಿ. ದಿನಕ್ಕೆ ಎರಡು ಬಾರಿ ಇದನ್ನು ಕುಡಿದರೆ ನಿಮ್ಮ ಅಸ್ತಮಾ ಸಮಸ್ಯೆಯು ಬೇಗನೆ ಗುಣವಾಗಬಹುದಾಗಿದೆ.
 
*ಲೈಕೋರೈಸ್ ಮತ್ತು ಶುಂಠಿ - ಪ್ರತಿದಿನ ಅರ್ಧ ಚಮಚ ಲೈಕೋರೈಸ್ ಮತ್ತು ಅರ್ಧ ಚಮಚ ಶುಂಠಿಯನ್ನು ಹಾಕಿದ ಚಹಾವನ್ನು ಕುಡಿದರೆ ಅಸ್ತಮಾ ರೋಗಲಕ್ಷಣಗಳು ಕಡಿಮೆಯಾಗುತ್ತದೆ.
 
*ಲವಂಗದ ಎಲೆ, ನಿಂಬೆ ಮತ್ತು ಶುಂಠಿ ಚಹಾ - ಇವುಗಳು ಅಸ್ಥಮಾ ಸಮಸ್ಯೆಗೆ ನೈಸರ್ಗಿಕವಾದ ಹಾಗೂ ಅತ್ಯುತ್ತಮ ಔಷಧವಾಗಿದೆ. ಒಂದು ಲೋಟ ನೀರಿಗೆ ಅರ್ಧ ಇಂಚು ಶುಂಠಿ ಮತ್ತು ಒಂದು ಇಂಚು ಲವಂಗದ ಎಲೆಯನ್ನು ಹಾಕಿ ಕುದಿಸಿ. ನಂತರ ಅದಕ್ಕೆ ಒಂದು ಚಮಚ ಟೀ ಪುಡಿಯನ್ನು ಹಾಕಿ 3-4 ನಿಮಿಷ ಕುದಿಸಿ. ಸೋಸಿದ ಚಹಾಕ್ಕೆ 3-4 ಹನಿ ನಿಂಬೆ ರಸ ಮತ್ತು ಒಂದು ಚಿಟಿ ಕಲ್ಲುಪ್ಪನ್ನು ಬೇಕಾದಲ್ಲಿ ಸೇರಿಸಿಕೊಳ್ಳಿ. ನಿಮಗೆ ಚಹಾದಲ್ಲಿ ಸಿಹಿ ಬೇಕಿದ್ದರೆ ಜೇನು ಅಥವಾ ಸಕ್ಕರೆಯನ್ನು ಹಾಕಿಕೊಳ್ಳಬಹುದು. ಇದನ್ನು ದಿನವೂ 2-3 ಬಾರಿ ಕುಡಿದರೆ ಒಳ್ಳೆಯದು.
 
*ಬೆಳ್ಳುಳ್ಳಿ ಮತ್ತು ಸಾಸಿವೆ ಎಣ್ಣೆ - 7-8 ಬೆಳ್ಳುಳ್ಳಿ ಎಸಳುಗಳನ್ನು ರುಬ್ಬಿ ಅದನ್ನು 1/2 ಚಮಚ ಸಾಸಿವೆ ಎಣ್ಣೆಯೊಂದಿಗೆ ಬಿಸಿಯಾದ ಅನ್ನಕ್ಕೆ ಹಾಕಿಕೊಂಡು ತಿಂದರೆ ತುಂಬಾ ಒಳ್ಳೆಯದು. ಬೆಳ್ಳುಳ್ಳಿ ರಕ್ತದ ದಟ್ಟಣೆಯನ್ನು ನಿವಾರಿಸುತ್ತದೆ ಮತ್ತು ಸಾಸಿವೆ ಎಣ್ಣೆ ದೇಹದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.
 
*ಹಾಲು ಮತ್ತು ಬೆಣ್ಣೆ - ಇದು ಅಸ್ತಮಾಗೆ ಉತ್ತಮ ಪರಿಹಾರವಾಗಿದೆ. ಒಂದು ಲೋಟ ಬೆಚ್ಚಗಿನ ಹಾಲಿಗೆ ಒಂದು ಚಮಚ ಬೆಣ್ಣೆಯನ್ನು ಸೇರಿಸಬೇಕು. ಅದು ಕರಗಿದಾಗ ಚೆನ್ನಾಗಿ ಮಿಕ್ಸ್ ಮಾಡಬೇಕು. ಮಲಗುವ ಸಮಯದಲ್ಲಿ ಇದನ್ನು ಕುಡಿದು ಮಲಗಿದರೆ ಅದು ಗಂಟಲ ಒಳಗಿನ ಉರಿಯನ್ನು ಕಡಿಮೆ ಮಾಡುತ್ತದೆ.
 
*ಈರುಳ್ಳಿ - ಒಂದು ಈರುಳ್ಳಿಯನ್ನು ರುಬ್ಬಿ ಅದರ ರಸವನ್ನು ತೆಗೆಯಿರಿ. ಅದಕ್ಕೆ ಎರಡರಿಂದ ಮೂರು ಚಮಚ ನೀರನ್ನು ಸೇರಿಸಿ. ನಂತರ 4 ಚಮಚ ನಿಂಬೆ ರಸ ಮತ್ತು 2 ಚಮಚ ಜೇನನ್ನು ಸೇರಿಸಿ ಮಿಕ್ಸ್ ಮಾಡಿ. ಇದನ್ನು ಬೆಚ್ಚಗಾಗುವವರೆಗೆ ಬಿಸಿ ಮಾಡಿ ದಿನಕ್ಕೆ ಎರಡರಿಂದ ಮೂರು ಬಾರಿ ಸೇವಿಸಿ.
 
*ಅರಿಶಿಣ, ಕಾಳುಮೆಣಸು ಮತ್ತು ಜೇನನ್ನು ಸೇರಿಸಿದ ಹಾಲು - ಒಂದು ಕಪ್ ಹಾಲಿಗೆ ಅರ್ಧ ಚಮಚ ಅರಿಶಿಣ, 2-3 ಚಮಚ ಜೇನು ಮತ್ತು ಚಿಟಿಕೆ ಕಾಳುಮೆಣಸಿನ ಪುಡಿಯನ್ನು ಸೇರಿಸಿ ಕುದಿಸಿ. ಇದನ್ನು ದಿನವೂ ಬಿಸಿ ಬಿಸಿಯಾಗಿ ಕುಡಿಯಬೇಕು.
 
*ತುಳಸಿ ರಸ ಮತ್ತು ಜೇನು - ಒಂದು ಹಿಡಿ ತಾಜಾ ತುಳಸಿ ಎಲೆಗಳನ್ನು ರುಬ್ಬಿ ಅದರ ರಸವನ್ನು ಬೇರ್ಪಡಿಸಿಕೊಳ್ಳಿ. ನಂತರ ಅದರಲ್ಲಿ 2 ಚಮಚ ಜೇನನ್ನು ಮಿಕ್ಸ್ ಮಾಡಿಕೊಂಡು ಸೇವಿಸಿ. ಇದು ಅಸ್ತಮಾಗೆ ಅತ್ಯುತ್ತಮ ಔಷಧವಾಗಿದ್ದು ತಕ್ಷಣಕ್ಕೆ ಆರಾಮವನ್ನು ಹೊಂದಲು ದಿನಕ್ಕೆ ಕನಿಷ್ಟ 2-3 ಬಾರಿ ಇದನ್ನು ಸೇವಿಸಿ.
 
ನೀವೂ ಸಹ ಅಸ್ತಮಾದಿಂದ ಬಳಲುತ್ತಿದ್ದರೆ ಈ ಸಲಹೆಗಳನ್ನು ಪ್ರಯತ್ನಿಸಿ ನೋಡಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಬಹುಪಯೋಗಿ ಕಲ್ಲಂಗಡಿ ಹಣ್ಣಿನ ಬೀಜ

ಅತಿ ಹೆಚ್ಚಿನ ನೀರಿನ ಅಂಶ ಹೊಂದಿರುವ ಕಲ್ಲಂಗಡಿ ಹಣ್ಣು ವಿಟಮಿನ್‌ ಎ, ಬಿ1, ಬಿ6, ವಿಟಮಿನ್‌ ಸಿ, ...

news

ಗುಲಾಬಿ ಹೂವಿನ ಚಹಾದ ಲಾಭಗಳು

ಒಂದು ಆರೋಗ್ಯಕರ ಗಿಡಮೂಲಿಕೆ ಚಹಾಗಳಲ್ಲಿ ಒಂದಾಗಿದೆ ಮತ್ತು ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುವುದರ ...

news

ತಲೆನೋವಿಗೆ ಈ 4 ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ

ತಲೆ ನೋವು ಬರಲು ಕಾರಣ ಒಂದಾ ಎರಡಾ? ಒತ್ತಡ, ಕಂಪ್ಯೂಟರ್ ‌ಮುಂದೆ ಕುಳಿತು ತಾಸುಗಟ್ಟಲೆ ಮಾಡುವ ಕೆಲಸ, ...

news

ಆರೋಗ್ಯಕರ ಮೊಸರನ್ನದ ಲಾಭಗಳು

ಆಹಾರ ಕ್ರಮದಲ್ಲಿ ಮೊಸರನ್ನಕ್ಕೆ ವಿಶೇಷ ಸ್ಥಾನವಿದೆ. ಕೆಲವರು ಇದನ್ನು ಇಷ್ಟುಟ್ಟಿ ತಿಂದರೆ ಇನ್ನೂ ಕೆಲವರು ...