ಈ ಐದು ಸೂಪರ್ ಫುಡ್ ಸೇವಿಸಿ!

ಮಿಟಮಿನ್, ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ ಹೆಚ್ಚಿಸಲು

Bangalore| Ramya kosira| Last Modified ಭಾನುವಾರ, 11 ಜುಲೈ 2021 (11:23 IST)
Superfoods: ತಜ್ಞೆ ರುಜುತಾ ದಿವಾಕರ್ ಕೂಡ ಇದನ್ನೇ ಹೇಳುತ್ತಾರೆ. ಅವರ ಇತ್ತೀಚಿನ ಆಡಿಯೋ ಬುಕ್, ‘ಈಟಿಂಗ್ ಇಂದ ಏಜ್ ಆಫ್ ಡಯೆಟಿಂಗ್’ನಲ್ಲಿ ನಾವು ತಿನ್ನಲೇಬೇಕಾದ ಕೆಲವು ಸೂಪರ್ ಫುಡ್ಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಸೂಪರ್ ಫುಡ್ಗಳಿಗೆ ಈ ದಿನಗಳಲ್ಲಿ ಎಲ್ಲಿಲ್ಲದ ಬೇಡಿಕೆ.

ಯಾವುದೇ ಆರೋಗ್ಯಕರ ಪದಾರ್ಥಗಳ ಕುರಿತ ಮಾತುಕತೆ, ಸೂಪರ್ ಫುಡ್ಗಳ ಉಲ್ಲೇಖವಿಲ್ಲದೆ ಕೊನೆಯಾಗದು. ಸೂಪರ್ ಫುಡ್ಗಳೆಲ್ಲವೂ ವಿದೇಶಗಳಿಂದಲೇ ಬರಬೇಕು ಎಂದಿಲ್ಲ. ಆದರೆ ನಮ್ಮ ದೇಸಿ ಸೂಪರ್
ಫುಡ್ಗಳು ಕೂಡ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಆಹಾರ ತಜ್ಞೆ ರುಜುತಾ ದಿವಾಕರ್ ಕೂಡ ಇದನ್ನೇ ಹೇಳುತ್ತಾರೆ. ಅವರ ಇತ್ತೀಚಿನ ಆಡಿಯೋ ಬುಕ್, ‘ಈಟಿಂಗ್ ಇಂದ ಏಜ್ ಆಫ್ ಡಯೆಟಿಂಗ್’ನಲ್ಲಿ ನಾವು ತಿನ್ನಲೇಬೇಕಾದ ಕೆಲವು ಸೂಪರ್ ಫುಡ್ಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
1. ಬಾಳೆ ಹಣ್ಣು

ಬಾಳೆಹಣ್ಣು ಶಕ್ತಿದಾಯಕ ಎಂಬುವುದು ಎಲ್ಲರಿಗೂ ಗೊತ್ತೇ ಇದೆ. ಅವು ಜೀರ್ಣಕ್ರೀಯೆ ಮತ್ತು ಹಾರ್ಮೋನ್ ಆರೋಗ್ಯಕ್ಕೆ ಉತ್ತಮ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬಾಳೆಹಣ್ಣು ಮೊಡವೆ ಮತ್ತು ಮೈಗ್ರೇನ್ ಸಮಸ್ಯೆಯಿಂದಲೂ ದೂರವಿಡುತ್ತದೆ. ತನ್ನೊಳಗೆ ಎಲ್ಲಾ ರೀತಿಯ ಆರೋಗ್ಯಕರ ಅಂಶಗಳನ್ನು ಅಡಗಿಸಿಕೊಂಡಿರುವ ಬಾಳೆಹಣ್ಣನ್ನು ಬೇಡ ಎನ್ನದಿರುವುದೇ ಒಳ್ಳೆಯದು.
2. ಹಲಸಿನ ಹಣ್ಣು
ಸಾಮಾನ್ಯ ಜನರ ನೆಚ್ಚಿನ ಹಲಸಿನಹಣ್ಣು ಈ ದಿನಗಳಲ್ಲಿ ದೇಶ ವಿದೇಶಗಳಲ್ಲೂ ಜನಪ್ರಿಯ. ಹಲಸಿನ ಹಣ್ಣು, ನಮ್ಮ ದೇಹದ ಜೀವಕೋಶಗಳಿಗೆ, ಅವು ಸಾಗಿಸುವ ಅನೇಕ ಫೈಟೋನ್ಯೂಟ್ರಿಯಂಟ್ಗಳನ್ನು ಹೀರಿಕೊಳ್ಳಲು ಮತ್ತು ಸಂಯೋಜಿಸಲು ಪ್ರಲೋಭನೆ ನೀಡುತ್ತದೆ. ಇದರಲ್ಲಿ ಹೇರಳ ವಿಟಮಿನ್, ಮಿನರಲ್ ಮತ್ತು ಫೈಬರ್ಗಳು ಇರುತ್ತವೆ. ಹಲಸಿನ ಹಣ್ಣಿನ ಬೀಜಗಳನ್ನು ಬೇಯಿಸಿ ಮತ್ತು ಹುರಿದು ತಿನ್ನಬಹುದು.
3. ಸೀತಾಫಲ
ಕಬ್ಬಿಣಾಂಶ, ಪೊಟಾಶಿಯಂ ಫೈಬರ್ ಮತ್ತು ಬಿ6 ಹೊಂದಿರುವ ಸೀತಾಫಲ , ನೈಸರ್ಗಿಕ ಸಕ್ಕರೆಯುಕ್ತ ಹಣ್ಣು. ಅದರಲ್ಲಿರುವ ಕೆರೊಟಿನಾಯ್ಡ್ಸ್ ನಮ್ಮ ದೇಹಕ್ಕೆ ವಿವಿಧ ಕಾಯಿಲೆಗಳನ್ನು ತರಬಲ್ಲ, ಫ್ರೀ ರ್ಯಾಡಿಕಲ್ಸ್ ವಿರುದ್ಧ ಹೋರಾಡುತ್ತವೆ. ಈ ಸಾಂಕ್ರಾಮಿಕ ರೋಗದ ಸಮಯದಲ್ಲಿ, ಎಲ್ಲರೂ ಸೀತಾಫಲವನ್ನು ತಿನ್ನುವುದು ಒಳ್ಳೆಯದು ಎನ್ನುತ್ತಾರೆ ರುಜುತಾ.
4. ಜಾಮೂನ್/ ನೇರಳೆ ಹಣ್ಣು
ಮಳೆಗಾಲದ ಹಣ್ಣು ನೇರಳೆ, ಪ್ರೊಟೀನ್ , ಫೈಬರ್, ಆ್ಯಂಟಿಆ್ಯಕ್ಸಿಡೆಂಟ್ಗಳು, ಕ್ಯಾಲ್ಸಿಯಂ, ಕಬ್ಬಿಣಾಂಶ, ಫಾಸ್ಫರಸ್, ಪೊಟ್ಯಾಶಿಯಂ, ಮ್ಯಾಂಗನೀಸ್, ವಿಟಮಿನ್ ಸಿ ಮತ್ತು ಬಿ6 ಮತ್ತಿತರ ಪೋಷಕಾಂಶಗಳನ್ನು ಹೊಂದಿರುವ ಸೂಪರ್ ಫುಡ್. ಶೀತ ಮತ್ತು ಕಡಿಮೆ ರೋಗ ನಿರೋಧಕ ಶಕ್ತಿ ಉಳ್ಳವರಿಗೆ , ನೇರಳ ಹಣ್ಣು ಉತ್ತಮ ಆಯ್ಕೆ. ಮಧುಮೇಹಿಗಳಿಗೂ ಇದು ಪ್ರಯೋಜನಕಾರಿ.
5. ಕುಸುಮ್
ಆಗ್ನೇಯ ಏಷ್ಯಾ , ಮಹಾರಾಷ್ಟ್ರ ಮತ್ತು ಭಾರತದೆಲ್ಲೆಡೆ ಕಾಡುಗಳಲ್ಲಿ ಬೆಳೆಯುವ ಕುಸುಮ್ ಹಣ್ಣು, ಸೌಂದರ್ಯವನ್ನು ಹೆಚ್ಚಿಸುವ ಗುಣಗಳಿಗಾಗಿ ಪ್ರಸಿದ್ಧಿ ಪಡೆದಿದೆ. ಹುಳಿ - ರುಚಿ ಸ್ವಾದವನ್ನು ಹೊಂದಿರುವ ಈ ಹಣ್ಣು ಕೂದಲು ಉದುರುವ ಸಮಸ್ಯೆ ಮತ್ತು ಮೊಡವೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಬುಡಕಟ್ಟು ಜನರು ಇದನ್ನು ಸೊನಾವೆ ಎಂಬ ಹೆಸರಿನಿಂದ ಕರೆಯುತ್ತಾರೆ
ಇದರಲ್ಲಿ ಇನ್ನಷ್ಟು ಓದಿ :