ಕಪ್ಪಾದ ಮತ್ತು ಮಂದವಾದ ಚರ್ಮವು ಹಲವಾರು ಕಾರಣಗಳಿಂದ ಉಂಟಾಗಿರಬಹುದಾಗಿದೆ. ಉದಾ: ಸೂರ್ಯನ ಬೆಳಕಿಗೆ ಹೆಚ್ಚು ತೆರೆದುಕೊಳ್ಳುವುದು, ಮಾಲಿನ್ಯ, ಕಳಪೆ ಜೀವನ ಶೈಲಿಯ ಆಯ್ಕೆಗಳು, ವೈದ್ಯಕೀಯ ಪರಿಸ್ಥಿತಿ, ಒತ್ತಡ, ಇತ್ಯಾದಿ. ತಿಳಿಯಾದ, ಕಾಂತಿಯುಕ್ತ ಬಣ್ಣವನ್ನು ಹೊಂದುವುದು ಹಲವು ಹುಡುಗಿಯರ ಕನಸಾಗಿದ್ದು ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಕ್ರೀಂಗಳು ಮತ್ತು ಲೋಷನ್ಗಳು ದೊರೆಯುತ್ತವೆ. ಆದರೆ ರಾಸಾಯನಿಕ ಆಧಾರಿತ ಸೌಂದರ್ಯವರ್ಧಕಗಳ ಬಳಕೆಯು ನಿಮ್ಮ ಚರ್ಮಕ್ಕೆ ಹಾನಿ ಉಂಟುಮಾಡುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಈ ಸುಲಭ ವಿಧಾನಗಳನ್ನು ಬಳಸಿ