ಪ್ರಶ್ನೆ : ನನಗೆ 35 ವರ್ಷ ವಯಸ್ಸಾಗಿದ್ದು, ನಾನು ಐಟಿ ಉದ್ಯೋಗದಲ್ಲಿದ್ದೇನೆ. ಕೆಲವು ತಿಂಗಳ ಹಿಂದೆ ನಾನು ನನ್ನ ಬಾಸ್ ಹೆಂಡತಿಯನ್ನು ಆಫೀಸ್ ನ ಭೋಜನಕೂಟ ಸಮಾರಂಭದಲ್ಲಿ ಭೇಟಿ ಮಾಡಿದ್ದೆ. ಆಕೆ ನನ್ನ ಕ್ಲಾಸ್ ಮೆಟ್ ಎಂದು ನನಗೆ ಅಂದು ತಿಳಿಯಿತು. ಆದ್ದರಿಂದ ನಾವಿಬ್ಬರು ತುಂಬಾ ಕ್ಲೋಸ್ ಆಗಿದ್ದು, ಕಾಲ್ ಮಾಡಿ ಮಾತನಾಡುತ್ತಿದ್ದೇವು. ಅಷ್ಟೇ ಅಲ್ಲದೇ ಸಾಮಾಜಿಕ ಮಾಧ್ಯಮದ ಮೂಲಕವು ಸಂಪರ್ಕದಲ್ಲಿದ್ದೇವು. ನಂತರದ ದಿನಗಳಲ್ಲಿ ಆಕೆ ತನ್ನ ಖಾಸಗಿ ವಿಚಾರಗಳನ್ನು ಹಂಚಿಕೊಳ್ಳತೊಡಗಿದ್ದಳು.