ಹೆಣ್ಣು ಮಕ್ಕಳಿಗೆ ನಾನಾ ಬಗೆಯ ಆರೋಗ್ಯ ಸಮಸ್ಯೆಗಳು ಇರಬಹುದು. ಕೆಲಸದ ಒತ್ತಡ, ಮನೆಯ ಜವಾಬ್ದಾರಿಯ ಜೊತೆ ಆರೋಗ್ಯದ ಚಿಂತೆ ಕೂಡ.. ಅದರಲ್ಲೂ ಋತುಸ್ರಾವ(ಪಿರಿಯಡ್ಸ್) ದ ಸಮಯದಲ್ಲಿನ ಹೊಟ್ಟೆನೋವು ಜೀವ ಹೋದಂತ ಅನುಭವ ನೀಡುತ್ತದೆ. ಪ್ರತಿ ತಿಂಗಳು ಸುಮಾರು 3 ರಿಂದ ನಾಲ್ಕು ದಿನ ಈ ನೋವನ್ನು ಅನುಭವಿಸುವ ಕಷ್ಟ ಅವರಿಗೆ ಗೊತ್ತು. ಈ ನೋವಿನ ಹಿಂದಿನ ವೈಜ್ಞಾನಿಕ ಕಾರಣ ಗರ್ಭಾಶಯದ ಒಳಪದರವು ಹೊರ ಬಂದಾಗ ಅದು ಹಿಂಡಿದಂತೆ ಆಗುತ್ತದೆ. ಅದು