ದಂಪತಿಗೆ ಲೈಂಗಿಕತೆಯ ಸಾಮರ್ಥ್ಯ ಇದ್ದರೂ ಅದನ್ನು ಅನುಭವಿಸಲಾಗದೆ ಪರಿತಪಿಸುತ್ತಾರೆ. ಕೆಲಸದ ಒತ್ತಡ, ಮಾನಸಿಕ ಸಮಸ್ಯೆ ಇದೆಲ್ಲಾ ಅವರನ್ನು ಲೈಂಗಿಕ ಉತ್ತುಂಗದ ಸುಖದಿಂದ ವಂಚಿತರನ್ನಾಗಿಸುತ್ತದೆ. ಇದಕ್ಕಿಂತಲೂ ಮುಖ್ಯವಾಗಿ ಗಂಡು ಹೆಣ್ಣಿನಿಂದ ಸಾಕಷ್ಟು ಲೈಂಗಿಕ ಸುಖವನ್ನು ಪಡೆಯುತ್ತಾನಾದರೂ ಹೆಣ್ಣು ಮಾತ್ರ ಅದನ್ನು ಪಡೆಯದೆ ಅತೃಪ್ತಳಾಗಿಯೇ ಉಳಿದುಬಿಡಬೇಕಾಗುತ್ತದೆ. ಹಾಸಿಗೆಯಲ್ಲಿ ಗಂಡನಿಗೆ ಸುಖ ನೀಡುತ್ತೇನೋ ಇಲ್ಲವೋ ಎಂಬ ಆತಂಕ ಕೂಡ ದೈನಂದಿನ ಜೀವನದ ಮೇಲೆ ದುಷ್ಪರಿಣಾಮ ಬೀರಬಲ್ಲದು. ತನ್ನ ದೇಹ ಅಂದವಾಗಿದೆಯೇ ಇಲ್ಲವೆ ಎಂಬ ದುಗುಡ, ಸೂಕ್ತ