ಭೂ ಮಂಡಲದಲ್ಲಿ ಮನುಷ್ಯ ಜೀವಿಯು ಪ್ರತಿದಿನ ಒಂದಲ್ಲಾ ಒಂದು ರೋಗಕ್ಕೆ ತುತ್ತಾಗುತ್ತಲೇ ಇದ್ದಾನೆ. ಕೆಲವೊಂದನ್ನು ಗುಣಪಡಿಸಲು ಸಾಧ್ಯವಾದರೆ ಇನ್ನು ಕೆಲವಕ್ಕೆ ಈಗಲೂ ಚಿಕಿತ್ಸೆಯನ್ನು ಕಂಡುಹಿಡಿಯುತ್ತಲೇ ಇದ್ದಾರೆ. ವೈದ್ಯಕೀಯ ಶಾಸ್ತ್ರದಲ್ಲಿ ಗಣನೀಯ ಬೆಳವಣಿಗೆಗಳು ಆಗಿದ್ದರೂ ದಿನಕ್ಕೊಂದು ರೋಗದ ಲಕ್ಷಣಗಳು ತಲೆದೋರುತ್ತಲೇ ಇವೆ. ಅಂತಹ ರೋಗಗಳ ಸಾಲಿಗೆ ಈ ಅಲರ್ಜಿಯೂ ಸೇರುತ್ತದೆ ಎಂದರೆ ತಪ್ಪಾಗಲಾರದು. ಪ್ರತಿಯೊಬ್ಬರೂ ಒಂದಲ್ಲಾ ಒಂದು ಅಲರ್ಜಿಯಿಂದ ಬಳಲುತ್ತಿರುತ್ತಾರೆ. ವ್ಯಕ್ತಿಯೊಬ್ಬನ ಶರೀರವು ಹಾನಿಕಾರಕವಾಗಿರುವ ಬಾಹ್ಯ ಪದಾರ್ಥಗಳ ವಿರುದ್ಧ ಹೋರಾಡುವ ಶಕ್ತಿಯನ್ನು