ನಮ್ಮ ದೈನಂದಿನ ಜೀವನದಲ್ಲಿ ಸಂಗೀತ ಒಂದು ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ, ಅದರಲ್ಲೂ ಇತ್ತೀಚಿನ ಯುವ ಪೀಳಿಗೆ ಸಂಗೀತವನ್ನು ಆಲಿಸದೇ ದಿನ ಕಳೆಯುವುದು ಕಷ್ಟಸಾಧ್ಯ ಎಂದೇ ಹೇಳಬಹುದು. ಸಂಗೀತ ಕೇಳಲೆಂದೇ ಇಂದಿನ ದಿನಗಳಲ್ಲಿ ತರಹೇವಾರಿ ಹೆಡ್ಫೋನ್ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅಷ್ಟೇ ಅಲ್ಲ ಪಾರ್ಟಿ ಪಬ್ ಅದು ಇದು ಅಂತಾ ದಿನದಲ್ಲಿ ಒಮ್ಮೆ ಆದರೂ ನಾವು ಸಂಗೀತದ ಸುಳಿಯಲ್ಲಿ ಸಿಕ್ಕಿಬಿದ್ದಿರುತ್ತೇವೆ. ಆದರೆ ವೈಜ್ಞಾನಿಕವಾಗಿ ಹೇಳುವುದಾದರೆ ಸಂಗೀತದಿಂದ ಕೇವಲ ಮನೋರಂಜನೆ ಮಾತ್ರವಲ್ಲ ಅದು