ಭಾರತದಲ್ಲಿ ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆಗೆ ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಆದರೂ ರಾಷ್ಟ್ರ ರಾಜಧಾನಿ ಸೇರಿದಂತೆ ಭಾರತದ ಸಾಕಷ್ಟು ಹಳ್ಳಿಗಳಲ್ಲಿ ಇನ್ನೂ ಬಾಲ್ಯ ವಿವಾಹ ಪದ್ಧತಿ ಜಾರಿಯಲ್ಲಿದೆ. ಇದರ ಜೊತೆಯಲ್ಲಿ ಅತ್ಯಾಚಾರ ಪ್ರಕರಣವೂ ಭಾರತದಲ್ಲಿ ಕಡಿಮೆಯೇನಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧ ಮಹಿಳೆಯರೂ ಈ ಕ್ರೌರ್ಯಕ್ಕೆ ಬಲಿಯಾಗ್ತಿರುವುದು ನೋವಿನ ಸಂಗತಿ. ಈ ಎರಡರ ಮಧ್ಯೆ ಭಾರತದಲ್ಲಿ ಆಗಿರುವ ಇನ್ನೊಂದು ಸಮಸ್ಯೆ ಹದಿಹರೆಯದ ಸಂಬಂಧ. ಅರೆ-ಬರೆ ತಿಳಿಯುವ ಹುಡುಗಿಯರು,ಹೈಸ್ಕೂಲ್ ಮೆಟ್ಟಿಲು ಏರುತ್ತಿದ್ದಂತೆ