ಒಂದು ವೇಳೆ ಊಟದಲ್ಲಿ ನೀವು ಉತ್ತಮ ಬ್ರ್ಯಾಂಡೆಡ್ ಉಪ್ಪು ಉಪಯೋಗಿಸುತ್ತಿದ್ದಲ್ಲಿ ಇಂದು ಬಹಿರಂಗವಾದ ಅಂಶ ನಿಮ್ಮನ್ನು ಆತಂಕಕ್ಕೆ ಈಡು ಮಾಡಲಿದೆ. ದೇಶದಲ್ಲಿಯೇ ಅತ್ಯುತ್ತಮ ಬ್ರ್ಯಾಂಡ್ ಉಪ್ಪು ಎಂದು ಕರೆಸಿಕೊಳ್ಳುವ ಕಂಪೆನಿಗಳು ಉಪ್ಪು ತಯಾರಿಕೆಯಲ್ಲಿ ಜೀವಕ್ಕೆ ಕುತ್ತು ತರುವ ವಿಷಕಾರಿ ಸೈನೈಡ್ ಬಳಸುತ್ತಿರುವುದು ಬಹಿರಂಗವಾಗಿದೆ. ಭಾರತದಲ್ಲಿ ತಯಾರಿಸಲಾಗುವ ಬ್ರ್ಯಾಂಡೆಡ್ ಉಪ್ಪಿನಲ್ಲಿ ಜೀವಕ್ಕೆ ಸಂಚಕಾರ ತರುವ ಪೋಟಾಶಿಯಂ ಫೋರೋಸೈನೈಡ್ನಂತಹ ಕಾರ್ಸಿನೋಜೆನಿಕ್ ಮತ್ತು ವಿಷಕಾರಿ ಪದಾರ್ಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿರುವುದು ಅಮೆರಿಕ ಲ್ಯಾಬರೋಟರಿ ಪತ್ತೆ